Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ

02:54 PM Feb 25, 2020 | Suhan S |

ಗದಗ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು.

Advertisement

ಈ ಕುರಿತು ಜಿಪಂ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿ, ರಾಜ್ಯ ಸರಕಾರ ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯತಿಯ ನೌಕರರ ವೇತನ ಪಾವತಿಗೆ ಬೇಕಾಗಿರುವ ಹಣವನ್ನು ಸರಕಾರವೇ ಭರಿಸುವ ತೀರ್ಮಾನ ಮಾಡಿರುವುದು ಸ್ವಾಗತಾರ್ಹ. ಆದರೆ, ಸಿಬ್ಬಂದಿ ವೇತನಕ್ಕೆ ಅನುದಾನದ ಕೊರತೆಯಾಗಿ ಮೂರ್‍ನಾಲ್ಕು ತಿಂಗಳು ವೇತನವಿಲ್ಲದೇ ನೌಕರರು ಸಮಸ್ಯೆಗೆ ಸಿಲುಕುವಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ಗ್ರಾ.ಪಂ. ನೌಕರರ ವೇತನಕ್ಕೆ ಅಗತ್ಯವಿರುವ 382 ಕೋಟಿ ರೂ. 2020-2021ನೇ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿಸಬೇಕು. ಕಂಪ್ಯೂಟರ್‌ ಆಪರೇಟರ್‌ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿಗಳಿಗೆ ತಿದ್ದುಪಡಿ ಮಾಡಬೇಕು. ಕರ ವಸೂಲಿಗಾರರು, ಕಂಪ್ಯೂಟರ್‌ ಆಪರೇಟರ್‌ ಕೋಟಾ ಹುದ್ದೆಗೆ ಶೇ. 70ನಿಂದ 100 ಕೋಟಾ ಹೆಚ್ಚಿಸಬೇಕು. ಲೆಕ್ಕ ಸಹಾಯಕ ಹುದ್ದೆಗಳ ಕೋಟಾ ಶೇ. 30 ನಿಂದ ಶೇ. 50ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವೈದ್ಯಕೀಯ ವೆಚ್ಚ ಸಿಗುವಂತಾಗಬೇಕು. 15 ತಿಂಗಳು ಗ್ರ್ಯಾಚೂಟಿ ಕೊಡಲು ಅವಕಾಶವಿದ್ದರೂ ಕೂಡಾ ಗ್ರ್ಯಾಚೂಟಿ ಸಿಗುತ್ತಿಲ್ಲ. ಅನುಮೋದನೆ ಆಗದೇ ಉಳಿದ ಸ್ವಚ್ಛತಾಗಾರರಿಗೆ ಅನುಮೋದನೆ ನೀಡಲು 23-07-2019ರ ಆದೇಶಕ್ಕೆ ಸೂಕ್ತ ತಿದ್ದುಪಡಿ ತರಬೇಕು. ಕನಿಷ್ಠ ವೇತನ ಪಡೆಯುವ ಎಲ್ಲರಿಗೂ ಬಿಪಿಎಲ್‌ ಪಡಿತರ ಚೀಟಿ ಉಳಿಸಿಕೊಳ್ಳಲು ಮಂಜೂರಾತಿ ಮಿತಿ 1.20 ಲಕ್ಷ ರೂ. ಗಳಿಂದ 2 ಲಕ್ಷ ರೂ. ಗೆ ಹೆಚ್ಚಿಸಬೇಕು. ಅದಕ್ಕಾಗಿ ಆಹಾರ ಇಲಾಖೆಗೆ ಪತ್ರ ಬರೆಯಬೇಕು ಎಂದು ಮನವಿ ಮಾಡಿದರು.

ರಾಜ್ಯ ಗ್ರಾ.ಪಂ. ನೌಕರರ ಸಂಘ(ಸಿಐಟಿಯು ಸಂಯೋಜಿತ) ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಬಿ. ನಾಡಗೌಡ್ರ, ಸಿಐಟಿಯು ಜಿಲ್ಲಾಧ್ಯಕ್ಷ ಮಹೇಶ ಹಿರೇಮಠ, ಗ್ರಾ.ಪಂ. ನೌಕರರ ಜಿಲ್ಲಾ ಸಮಿತಿ ಅಧ್ಯಕ್ಷ ಬಸವರಾಜ ಮಂತೂರ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಗ್ರಾ.ಪಂ. ನೌಕರರ ಸಂಘದ ಮುಖಂಡರಾದ ರುದ್ರಪ್ಪ ಕಂದಗಲ್ಲ, ರುದ್ರಗೌಡ ಸಂಕನಗೌಡ್ರ, ಬಸವರಾಜ ಅರ್ಕಸಾಲಿ, ಐ.ಎಚ್‌. ಪಾಟೀಲ, ಎನ್‌.ಬಿ. ಬಡಿಗೇರ, ಎಸ್‌.ಎಫ್‌. ಶ್ಯಾಗೋಟಿ, ಎಸ್‌.ಬಿ. ಯಲಿಗಾರ, ಎಂ.ಬಿ. ಭೂಮಣ್ಣವರ, ರಾಜು ಕಲ್ಲಗುಡಿ ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next