Advertisement

ತುಳಜಾಪುರ ಗ್ರಾಮದಲ್ಲಿ ಕುಡಿವ ನೀರಿಗಾಗಿ ನಿರಶನ

01:27 PM Apr 28, 2022 | Team Udayavani |

ಔರಾದ: ಸಮರ್ಪಕ ಕುಡಿವ ನೀರು ಸರಬರಾಜು ಹಾಗೂ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಬುಧವಾರ ತಾಲೂಕಿನ ತುಳಜಾಪುರ ಗ್ರಾಮಸ್ಥರು ಎಕಲಾರ ಗ್ರಾಪಂ ಕಚೇರಿಯಲ್ಲಿ ಪಿಡಿಒಗೆ ಘೇರಾವ ಹಾಕಿ ಪ್ರತಿಭಟಿಸಿದರು.

Advertisement

ತುಳಜಾಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿಲ್ಲದೆ ಜನ ಪರದಾಡುತ್ತಿದ್ದಾರೆಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರು ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ಕಚೇರಿಗೆ ಬಂದು ಪ್ರತಿಭಟನೆ ನಡೆಸಿ ಘೇರಾವ್‌ ಹಾಕಲಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕ ಸುದೇಶ ಕೊಡೆ ಭೇಟಿ ನೀಡಿ, ಗ್ರಾಮದಲ್ಲಿ ನೂತನ ಕೊಳವೆ ಬಾವಿ ಕೊರೆಯುವ ಕಾರ್ಯ ಮಾಡಲಾಗುವುದು. ಸದ್ಯ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಕುಡಿಯಲು ತೆಗೆದುಕೊಂಡು ಬನ್ನಿ. ಅದರಂತೆ ಮೂರು ಟ್ಯಾಂಕ್‌ ನೀರು ಸರಬರಾಜು ಮಾಡಲಾಗಿದ್ದು, ಶೀಘ್ರ ನೀರಿನ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ ಸಿಂಧೆ, ವೀರಶಟ್ಟಿ ಸಿಂಧೆ, ಸಂತೋಷ ಕಾಂಬಳೆ, ಪ್ರತ್ವಿ, ಶಾಂತಾಬಾಯಿ, ಸರುಬಾಯಿ, ಉತ್ತಮಬಾಯಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next