Advertisement

ಮೇಲ್ಸೇತುವೆ ನಿರ್ಮಾಣಕ್ಕೆಆಗ್ರಹಿಸಿ ಡಿಎಸ್ಸೆಸ್‌ ಧರಣಿ

11:13 AM Dec 31, 2019 | Team Udayavani |

ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಪಟ್ಟಣದ ಡಿಎಸ್ಸೆಸ್‌ ನಗರದ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಹಾಗೂ ಮೂಲಸೌಲಭ್ಯ ಕಲ್ಪಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಧರಣಿ ನಡೆಯಿತು.

Advertisement

ಪಟ್ಟಣದ ಮಧ್ಯಭಾಗದಲ್ಲಿ ಹಾಯ್ದುಹೋಗಿರುವ ಚತುಷ್ಪಥ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಡಿಎಸ್ಸೆಸ್‌ ನಗರದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಹಾಗೂ ದೇಶಪಾಂಡೆ ಪ್ಲಾಟ್‌ನಲ್ಲಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ನಗರ ಘಟಕದ ಸಂಚಾಲಕ ಕುಮಾರ ಸೈದಾಪುರ ಒತ್ತಾಯಿಸಿದರು.

ಧರಣಿ ಸ್ಥಳಕ್ಕೆ ತಹಶೀಲ್ದಾರ್‌ ಕೊಟ್ರೇಶ ಗಾಳಿ ಭೇಟಿ ನೀಡಿ, ಆದಷ್ಟು ಬೇಗ ಬೇಡಿಕೆಗಳನ್ನು ಜಿಲ್ಲಾಡಳಿತ ಈಡೇರಿಸಲಿದೆ ಎಂದು ಭರವಸೆ ನೀಡಿ ಧರಣಿ ನಿರತರ ಮನವಿ ಸ್ವೀಕರಿಸಿ ನಿರ್ಗಮಿಸಿದರು. ಬಳಿಕ ದೂರವಾಣಿ ಕರೆಯಲ್ಲಿ ಮಾತನಾಡಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಾಗ ಧರಣಿ ನಿರತರು ತಮ್ಮ ಧರಣಿ ಹಿಂಪಡೆದರು.

ರಿಷಿಕುಮಾರ ಸಾರಂಗಿ, ನಿಂಗಪ್ಪ ಕೆಳಗೇರಿ, ಬಸಪ್ಪ ಮಾದರ, ಮಂಜುನಾಥ ಕಿನಕೇರಿ, ಮಂಜುಳಾ ಹೊಸಮನಿ, ರವಿ ಹುಣಶಿಮರದ, ಮಲ್ಲೇಶ ಅಜ್ಜನ್ನವರ, ಶರಣಪ್ಪ ಮುಂದಿನಮನಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next