Advertisement

ಹೆಚ್ಚುವರಿ ಬಸ್‌ ಸೇವೆಗೆ ಆಗ್ರಹಿಸಿ ಪ್ರತಿಭಟನೆ

10:33 AM Jul 17, 2019 | Suhan S |

ನರೇಗಲ್ಲ: ಸಮೀಪದ ಜಕ್ಕಲಿ ಮಾರ್ಗವಾಗಿ ನರೇಗಲ್ಲ, ರೋಣ, ಗದಗ, ಗಜೇಂದ್ರಗಡ ನಗರಗಳಿಗೆ ಸಮರ್ಪಕ ಬಸ್‌ ಸೇವೆ ಒದಗಿಸುವಂತೆ ಒತ್ತಾಯಿಸಿ ಜಕ್ಕಲಿ ಗ್ರಾಮದ ವಿದ್ಯಾರ್ಥಿಗಳು, ಗ್ರಾಮಸ್ಥರು, ಕರವೇ ಕಾರ್ಯಕರ್ತರು ಬಸ್‌ ತಡೆದು ಪ್ರತಿಭಟನೆ ನಡೆಸಿದರು.

Advertisement

ತಾಲೂಕು ಕರವೇ ಅಧ್ಯಕ್ಷ ಉಮೇಶ ಮೇಟಿ ಮಾತನಾಡಿ, ಗ್ರಾಮದಿಂದ ನಿತ್ಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿನಿದಿನ ಶಾಲಾ, ಕಾಲೇಜುಗಳಿಗೆ ತೆರಳಬೇಕು. ಆದರೆ, ಈ ಗ್ರಾಮಕ್ಕೆ ಸಮರ್ಪಕವಾದ ಬಸ್‌ ಸಂಚಾರ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಸಮಸ್ಯೆ ಕುರಿತು ಅನೇಕ ಬಾರಿ ಮಾಹಿತಿ ಹಾಗೂ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಎರಡು ದಿನಗಳಲ್ಲಿ ಈ ವ್ಯವಸ್ಥೆ ಕಲ್ಪಿಸದೆ ಹೋದಲ್ಲಿ ಶಾಲೆಯ ಮಕ್ಕಳ ಜೊತೆಗೆ ಪಾಲಕರು ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಸಂಗಮೇಶ ಮೆಣಸಗಿ ಮಾತನಾಡಿ, ಕೂಡಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೆಚ್ಚುವರಿ ಬಸ್‌ ಸೌಲಭ್ಯ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಈ ವೇಳೆ ರೋಣ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ವಿ.ಎಸ್‌. ಕಾಗವಾಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಜಕ್ಕಲಿ ಮಾರ್ಗವಾಗಿ ನರೇಗಲ್ಲ ಸೇರಿದಂತೆ ಗದಗ ನಗರಕ್ಕೆ ಎರಡು ದಿನಗಳಲ್ಲಿ ಹೆಚ್ಚುವರಿಗೆ ಬಸ್‌ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆದರು.

ರವೀಂದ್ರ ಮುಗಳಿ, ರಾಜು ಮಸಲವಾಡ, ಮಲ್ಲಿಕಾರ್ಜುನ ಮುಧೋಳ, ಗೊಡಚಪ್ಪ ಅಕ್ಕಿಶೆಟ್ಟರ್‌, ಮಂಜುನಾಥ ಆದಿ, ಚಂದ್ರ ಆದಿ, ಸುಭಾಷ್‌ ಕೆಳಗಡಿ, ವೀರಭದ್ರಪ್ಪ ಗಾಣಿಗೇರ, ಮಲ್ಲಪ್ಪ ಪಲ್ಲೇದ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next