Advertisement

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

02:41 PM Dec 10, 2019 | Suhan S |

ಶಿವಮೊಗ್ಗ: ಹೊಸನಗರ ತಾಲೂಕು ಆಹಾರ ನಿರೀಕ್ಷಕ ಐ.ಡಿ.ದತ್ತಾತ್ರೆಯ ಅವರ ಆತ್ಮಹತ್ಯೆಗೆ ಅಧಿಕಾರಿಗಳೇ ಕಾರಣ, ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾ ಶಾಖೆಯ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಆಹಾರ ನಿರೀಕ್ಷಕ ದತ್ತಾತ್ರೇಯ ಅವರ ಆತ್ಮಹತ್ಯೆಗೆ ಹೊಸನಗರ ತಾಲೂಕಿನ ತಹಶೀಲ್ದಾರ್‌, ಉಪ ತಹಶೀಲ್ದಾರ್‌ ಸೇರಿದಂತೆ ಸುಮಾರು 9 ಅಧಿ ಕಾರಿಗಳು ಕಾರಣರಾಗಿದ್ದಾರೆ. ತಮ್ಮ ಸಾವಿಗೆ ಇವರೇ ಕಾರಣ ಎಂದು ಡೆತ್‌ನೋಟ್‌ ಸಹ ಅವರು ಬರೆದಿದ್ದಾರೆ. ಈಗಾಗಲೇ 9 ಜನರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣರಾದ ಈ ಎಲ್ಲರನ್ನು ಕೆಲಸದಿಂದ ಅಮಾನತುಗೊಳಿಸಿ ಕೂಡಲೇ ಬಂಧಿಸುವಂತೆ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ದತ್ತಾತ್ರೇಯ ಅವರಿಗೆ ಗ್ರಾಮ ಲೆಕ್ಕಿಗ ಹುದ್ದೆಯಿಂದ ಪದೋನ್ನತಿ ಆಗಿತ್ತು. ಇದರ ವೇತನವನ್ನು ಮಾಡಲು ತಹಶೀಲ್ದಾರ್‌ ಸೇರಿದಂತೆ ಕಚೇರಿಯ ಇತರರು ವಿನಾಕಾರಣ ವಿಳಂಬ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮಗಳ ಮದುವೆಗೂ ರಜೆ ಕೊಟ್ಟಿರಲಿಲ್ಲ. ಅಲ್ಲದೇ ದತ್ತಾತ್ರೇಯ ಮೇಲೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದರು. ಆರೋಗ್ಯ ತಪಾಸಣೆಗೂ ರಜೆ ನೀಡಲಿಲ್ಲ. ಈ ಅ ಧಿಕಾರಿಗಳು ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಕುಟುಂಬದವರು ಈಗಾಗಲೇ ದೂರು ನೀಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಲ್ಲದೇ ತಹಶೀಲ್ದಾರ್‌ ಅವರು ಪದೋನ್ನತಿ ಹೊಂದಿದ ನೌಕರರನ್ನು ಬಿಡುಗಡೆಗೊಳಿಸಲು ಲಂಚ ಪಡೆಯುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಶಿರಸ್ತೇದಾರ್‌ ಇದಕ್ಕೆ ಮಧ್ಯವರ್ತಿ ಆಗಿದ್ದಾರೆ. ಅಷ್ಟೆ ಅಲ್ಲ ಮಹಿಳಾ ಸಿಬ್ಬಂದಿಗೂ ಸಹ ಕಿರುಕುಳ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಮತ್ತು ಆತ್ಮಹತ್ಯೆಗೆ ಕಾರಣವಾಗಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಮೃತ ದತ್ತಾತ್ರೇಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಕಿರಿಯ ಮಗಳಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿಕೆಲಸ ನೀಡಬೇಕು ಎಂದು ಆಗ್ರಹಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೆ.ಅರುಣ್‌ ಕುಮಾರ್‌, ಗ್ರಾಮ ಲೆಕ್ಕಿಗರ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್‌ ನಾಯ್ಕ, ಪ್ರಮುಖರಾದ ಕೃಷ್ಣಪ್ಪ, ಎಚ್‌.ಪಿ.ಗಣೇಶ್‌ ಸೇರಿದಂತೆ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next