Advertisement

ಸೀಲ್‌ಡೌನ್‌ ಮಾಡಿದ್ದಕ್ಕೆ ಪ್ರತಿಭಟನೆ

09:53 AM Aug 02, 2020 | Suhan S |

ಬಂಗಾರಪೇಟೆ: ತಾಲೂಕಿನ ದೊಡ್ಡಪನ್ನಾಂಡಹಳ್ಳಿಯ 22 ಮಂದಿಗೆ ಕೋವಿಡ್ ಪಾಸಿಟಿವ್‌ ಬಂದಿದ್ದರಿಂದ ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದರಿಂದ ಬೇಸತ್ತ ಗ್ರಾಮದ ಕೆಲವರು, ಯಾರಿಗೂ ಸೋಂಕು ಬಂದಿಲ್ಲ, ಇದರಿಂದ ಗ್ರಾಮಕ್ಕೆ ಕಳಂಕ ಬಂದಿದೆ ಎಂದು ಆರೋಪಿಸಿ ಪ್ರತಿಭಟಿಸಿದರು.

Advertisement

ಕಳೆದ ವಾರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 60 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ನಂತರ ಅವರಿಗೆ ಕೋವಿಡ್ ಸೋಂಕು ಖಚಿತವಾಗಿತ್ತು. ಹೀಗಾಗಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ 53 ಮಂದಿಯನ್ನು ಆರೋಗ್ಯ ಇಲಾಖೆ ಪರೀಕ್ಷೆ ಮಾಡಿತ್ತು. ಇದರಲ್ಲಿ 22 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದನ್ನು ನಿರಾಕರಿಸಿರುವ ಕೆಲ ಗ್ರಾಮಸ್ಥರು ಯಾರಿಗೂ ಸೋಂಕು ಬಂದಿಲ್ಲ, ಇದರಿಂದ ಗ್ರಾಮಕ್ಕೆ ದೊಡ್ಡ ಕಳಂಕ ಬಂದಿದೆ ಎಂದು ಆರೋಪಿಸಿ ಪ್ರತಿಭಟಿಸಿದರು. ಸಾವನ್ನಪ್ಪಿದ ವೃದ್ಧೆ, 22 ಮಂದಿಗೆ ಕೋವಿಡ್ ಪಾಸಿಟಿವ್‌ ಬಂದಿರುವ ರಿಪೋರ್ಟ್‌ ಕೊಡಿ ಎಂದು ಆರೋಗ್ಯ ಅಧಿಕಾರಿಗಳನ್ನು ಆಗ್ರಹಿಸಿದರು.

ಶನಿವಾರ ಮಧ್ಯಾಹ್ನ ವೇಳೆಗೆ ಸ್ಥಳಕ್ಕೆ ಡೀಸಿ ಆಗಮಿಸಬೇಕೆಂದು ಪಟ್ಟುಹಿಡಿದ್ದಿದ್ದರು. ಆದರೆ, ಯಾವುದೇ ಅಧಿಕಾರಿಗಳು ಆಗಮಿಸದ ಕಾರಣ ಕೆಲ ಕಾಲ ಪ್ರತಿಭಟಿಸಿ, ವಾಪಸ್ಸಾಗಿದ್ದಾರೆ. ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥರಾವ್‌, ಸಿಂಗೋಲೆ, ಶಂಕರ್‌, ಲಕ್ಷ್ಮಣ್‌ ರಾವ್‌, ಕೃಷ್ಣೋಜಿರಾವ್‌, ಸುರೇಶ್‌, ಬಾಬುರಾವ್‌, ರಾಮ್‌ಶೆಟ್ಟಿ, ರಾಮೋಜಿರಾವ್‌ ಭಾಗವಹಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರಿ, ತಾಲೂಕಿನ ದೊಡ್ಡಪನ್ನಾಂಡಹಳ್ಳಿ ಗ್ರಾಮದಲ್ಲಿ 22 ಮಂದಿಗೆ ಕೋವಿಡ್ ಬಂದಿರುವುದು ದೃಢವಾಗಿದೆ. ಇದರ ಸಂಪೂರ್ಣ ದಾಖಲೆ ಇದೆ. ಇವರ ರ್ಯಾಪಿಡ್‌ ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯನ್ನು ನಾವೇನು ಮಾಡಿಲ್ಲ. ಜಿಲ್ಲಾ ಆರೋಗ್ಯ ಇಲಾಖೆ ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next