Advertisement

ಮೊಕದ್ದಮೆ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

02:38 PM Jun 22, 2022 | Team Udayavani |

ಕಲಬುರಗಿ: ತಾಲೂಕಿನ ನಂದೂರ ಗ್ರಾಮದ ಹತ್ತಿರ ಇರುವ ಸರ್ವೇ ನಂ. 77/1ರ 11ಜನ ಬಾಪು ನಾಯಕ ತಾಂಡಾದ ರೈತರ ಮೇಲೆ ಹಾಕಿರುವ ಮೊಕದ್ದಮೆ ಕೂಡಲೇ ಹಿಂಪಡೆಯಬೇಕು ಮತ್ತು ಸಾಗುವಳಿ ಮಾಡುತ್ತಿರುವವರ ಜಮೀನು ಸಕ್ರಮಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ಮಾಡಿದರು.

Advertisement

ತಾಲೂಕಿನ ನಂದೂರ ಗ್ರಾಮದ ಹತ್ತಿರವಿರುವ ಕಂದಾಯ ಜಮೀನಿನಲ್ಲಿರುವ ಸರ್ವೇ ನಂ.77/1ರ ಜಮೀನಿನಲ್ಲಿ ಅಕ್ರಮ ಸಾಗುವಳಿ ನಡೆಯುತ್ತಿದೆ ಎಂದು ತಹಶೀಲ್ದಾರ್‌ ವರದಿ ಆಧರಿಸಿ ಮೊಕದ್ದಮೆ ದಾಖಲಿಸಲಾಗಿದೆ. ಆದರೆ 30 ವರ್ಷಗಳಿಂದ ಅಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಇದಕ್ಕೆ ದಾಖಲೆಗಳೂ ಇವೆ. ಆದರೆ ಇವತ್ತು ಏಕಾಏಕಿ ರೈತರ ವಿರುದ್ಧ ದೂರು ದಾಖಲಿಸುವುದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ದುಡಿಯವ ರೈತರಿಗೆ ಜಮೀನು ತಪ್ಪಿಸುವ ಹುನ್ನಾರ ಇದರಲ್ಲಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ವೇಳೆ ಜಿಲ್ಲಾ ಅಧ್ಯಕ್ಷ ಗಣಪತರಾವ್‌ ಮಾನೆ, ಕಾರ್ಯದರ್ಶಿ ಮಹೇಶ ಎಸ್‌.ಬಿ. ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next