ರಾಣಿಬೆನ್ನೂರ: ಸಹಕಾರಿ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ -ಜಿಎಸ್‌ಟಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಸ್ಟೇಟ್ ಕೋ-ಆಪ್ ಸೊಸೈಟೀಸ್ ಅಸೋಸಿಯೇಷನ್ ನೇತೃತ್ವದಲ್ಲಿ ಸಹಕಾರಿ ಸಂಸ್ಥೆಗಳ ಪದಾಧಿ ಕಾರಿಗಳು-ಸಿಬ್ಬಂದಿ ನಗರದಲ್ಲಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಮಂಜುನಾಥ ಹಾದಿಮನಿ
ಅವರಿಗೆ ಮನವಿ ಸಲ್ಲಿಸಿದರು. ಲ್ಲಿನ ಚನ್ನೇಶ ಪತ್ತಿನ ಸಹಕಾರಿ ಸಂಘದ ಬಳಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಿನಿ ವಿಧಾನಸೌಧಕ್ಕೆ ಬಂದು ಸೇರಿದರು. ದಾರಿಯುದ್ದಕ್ಕೂ ಪ್ತ ಭಟನಾಕಾರರು ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಘೋಷಣೆ ಕೂಗಿದರು. ನಂತರ ಉಪ ತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರಿಗೆ ಮನವಿ ಸಲ್ಲಿಸಿದರು.
ರತ್ನಾಕರ ಕುಂದಾಪುರ ಮಾತನಾಡಿ, ಸಹಕಾರಿ ಕ್ಷೇತ್ರ ಉಳಿಸಿ-ಬೆಳೆಸುವ ದೃಷ್ಟಿಯಿಂದ ಸಹಕಾರಿ ಕ್ಷೇತ್ರದ ಮೇಲೆ ವಿಧಿ ಸಿರುವ ಆದಾಯ ತೆರಿಗೆ, ಟಿಡಿಎಸ್-ಜಿಎಸ್‌ಟಿ ಕೂಡಲೇ ರದ್ದುಪಡಿಸಬೇಕು. ಪ್ರಧಾನ ಮಂತ್ರಿಗಳು ಹಾಗೂ ಹಣಕಾಸು
ಚಿವರು ಸಮಸ್ಯೆ ಅರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕೆ.ಶಿವಲಿಂಗಪ್ಪ, ಕೆ.ವಿ. ಶ್ರೀನಿವಾಸ,
ಬಸವರಾಜ ರ, ಕೆ.ಎನ್. ಪಾಟೀಲ, ವೀರೇಶ ಕೋರಿ, ಕೃಷ್ಣಮೂರ್ತಿ ಸುಣಗಾರ, ಬಿ.ಐ. ಪಾಟೀಲ, ನಾಗಭೂಷಣ ನಿಡಗುಂದಿ, ಮಂಜುನಾಥ ಬಾಳಿಕಾಯಿ, ಪ್ರಶಾಂತ ನಿಡಗುಂದಿ, ಉಮೇಶ ಪಟ್ಟಣಶೆಟ್ಟಿ, ವೀರೇಶ, ಪ್ರವೀಣ ಸುರಹೊನ್ನೆ, ಜಯದೇವ ಸೊಪ್ಪಿನ ಇತರರಿದ್ದರು.