Advertisement

Mangaluru: ಅತಿಥಿ ಉಪನ್ಯಾಸಕರ ಖಾಯಮಾತಿ ಆಗ್ರಹಿಸಿ ಪ್ರತಿಭಟನೆ

12:45 AM Dec 08, 2023 | Team Udayavani |

ಮಂಗಳೂರು: ರಾಜ್ಯ ಸರಕಾರ 2005ರಿಂದ ಅತಿಥಿ ಉಪನ್ಯಾಸಕರ ನೇಮಕ ಮಾಡುತ್ತಿದ್ದರೂ ಯಾವುದೇ ವೇತನ ಸೌಲಭ್ಯ, ಸೇವಾ ಭದ್ರತೆ ನೀಡದೆ ಸಂಕಷ್ಟದ ಪರಿಸ್ಥಿತಿ ಸೃಷ್ಟಿಸಿದೆ. ಚುನಾವಣೆ
ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಯಂತೆ ಅತಿಥಿ ಉಪನ್ಯಾಸಕರನ್ನು ತತ್‌ಕ್ಷಣವೇ ಖಾಯಂಗೊಳಿಸಿ ಪಿಎಫ್‌ ಸೇರಿದಂತೆ ಸೇವಾಭದ್ರತೆ ನೀಡಬೇಕು ಎಂದು ಅತಿಥಿ ಉಪನ್ಯಾಸಕರ ದ.ಕ., ಕೊಡಗು, ಉಡುಪಿ ಸಂಘದ ಮಾಜಿ ಅಧ್ಯಕ್ಷ ಮಾಧವ ಕೆ.ಬಿ. ಹೇಳಿದರು.

Advertisement

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿ ಬಳಿಕ ನಡೆದ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸರಕಾರಿ ಕಾಲೇಜುಗಳ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟು ಉಪನ್ಯಾಸಕರಲ್ಲಿ ಶೇ. 70ರಷ್ಟು ಅತಿಥಿ ಉಪನ್ಯಾಸಕರಿದ್ದು, ಕಾಲೇಜುಗಳಲ್ಲಿ ಕೇವಲ ಬೋಧನೆ ಮಾತ್ರವಲ್ಲದೆ ಇನ್ನಿತರ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಉಪನ್ಯಾಸಕರ ಖಾಯಂ ಮಾಡಲು ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ದ.ಕ. ಜಿಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಧೀರಜ್‌ ಕುಮಾರ್‌ ಮಾತನಾಡಿ, 10 ತಿಂಗಳ ವೇತನವು ಸಹಜ ನ್ಯಾಯದ ವಿರುದ್ಧ ಇರುವುದರಿಂದ 12 ತಿಂಗಳ ವೇತನವನ್ನು ಹಾಗೂ ಯುಜಿಸಿ ನಿಯಮದ ಮಿತಿಯಲ್ಲಿ ತಿಂಗಳ 10ನೇ ತಾರೀಕಿನ ಮೊದಲು ನೀಡಬೇಕು. ಸಿಬಂದಿ ಸೇವಾ ನಿಯಮದಂತೆ ಪಿಎಫ್‌, ಇಎಸ್‌ಐ, ಗ್ರಾಚ್ಯುಟಿ, ಸೌಲಭ್ಯ, ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ, ಸಿಬಂದಿ ಸೇವಾ ನಿಯಮದಂತೆ ರಜೆಯ ಸೌಲಭ್ಯ, ಸೇವಾ ಅವಧಿಯಲ್ಲಿ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು ಎಂದರು.

ಅತಿಥಿ ಉಪನ್ಯಾಸಕರಿಂದ ಶಿಕ್ಷಣ
ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ| ರಾಮೇಗೌಡ ಮನವಿ ಸ್ವೀಕರಿಸಿ ದರು. ಮಂಗಳೂರು ವಿ.ವಿ. ಸಿಂಡಿಕೇಟ್‌ಮಾಜಿ ಸದಸ್ಯ ಹರೀಶ್‌ ಆಚಾರ್‌ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ದ.ಕ. ಜಿಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣ ಸಮಿತಿ ಕಾರ್ಯದರ್ಶಿ ಮಹಾಂತೇಶ್‌, ಉಪಾಧ್ಯಕ್ಷ ಡಾ| ವಿನೋದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next