Advertisement

ಖಾತ್ರಿ ಕೂಲಿ ಹಣ ಪಾವತಿಸಲು ಆಗ್ರಹಿಸಿ ನಿರಶನ 

05:45 PM Aug 22, 2018 | Team Udayavani |

ಗಂಗಾವತಿ: ಕಳೆದ ಮೂರು ತಿಂಗಳ ಹಿಂದೆ ಮಾಡಿದ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಪಾವತಿಸುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಹಣವಾಳ ಗ್ರಾಮದಿಂದ ತಾಪಂ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು.

Advertisement

ಕಳೆದ ಮೂರು ತಿಂಗಳ ಹಿಂದೆ ಖಾತ್ರಿ ಯೋಜನೆಯಡಿ ಮಾಡಿದ ಕೂಲಿ ಹಣ ಇನ್ನೂ ಪಾವತಿಯಾಗಿಲ್ಲ. ಹಲವು ಭಾರಿ ಗ್ರಾಪಂ, ತಾಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆ ಕುರಿತು ಕನಕಗಿರಿ ಶಾಸಕ ದಡೇಸೂಗೂರು ಬಸವರಾಜ ಅವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಪಾದಯಾತ್ರೆ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯಲಾಗಿದೆ. ಕೂಲಿ ಹಣ ಪಾವತಿ ಮಾಡುವ ತನಕ ಅಹೋರಾತ್ರಿ ಧರಣಿ ನಡೆಸಲು ಕಾರ್ಮಿಕರು ನಿರ್ಧರಿಸಿದ್ದಾರೆ.

ಎಂ.ಬಸವರಾಜ, ಕಾರ್ಯದರ್ಶಿ ಕೆ.ಹುಸೇನ, ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್‌, ಮುಖಂಡ ಜಿ.ನಾಗರಾಜ, ಗಂಗಾಧರಸ್ವಾಮಿ, ಶಿವ ಬೆಣಕಲ್‌, ಮರಿನಾಘ, ದುರುಗೇಶ ಹಣವಾಳ, ಬಸಮ್ಮ, ದುರುಗಮ್ಮ, ನಿಂಗಪ್ಪ, ಬಸಮ್ಮ ಹಾಗೂ ದುರುಗಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next