Advertisement

ನೆರೆ ಹಾನಿ ಪರಿಹಾರ ವಿತರಣೆಗೆ ಒತ್ತಾಯಿಸಿ ಪ್ರತಿಭಟನೆ

10:00 AM Aug 23, 2019 | Suhan S |

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಮೇದಾರ ಓಣಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಜಲಾವೃತಗೊಂಡಿದ್ದ ಪ್ರದೇಶದ ನಿವಾಸಿಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮೇದಾರ ಓಣಿ ನಾಗರಿಕರ ಹೋರಾಟ ಸಮಿತಿ ಹಾಗೂ ಎಸ್‌ಯುಸಿಐ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

Advertisement

ಮಳೆಗೆ ಹಳೇಹುಬ್ಬಳ್ಳಿ ಮೇದಾರ ಓಣಿಯ ಪಕ್ಕದಲ್ಲಿರುವ ದೊಡ್ಡ ನಾಲಾ ತುಂಬಿ ಹರಿದು ಅಕ್ಕಪಕ್ಕದಲ್ಲಿದ್ದ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಇದುವರೆಗೂ ಯಾರೊಬ್ಬರು ತಮ್ಮ ನೋವು ಕೇಳಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮೇದಾರ ಓಣಿಯಲ್ಲಿ ಬಡಜನರು ವಾಸಿಸುತ್ತಿದ್ದು, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ತಮ್ಮ ಜೀವನ ನಡೆಸುತ್ತಿದ್ದಾರೆ. ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಕೂಡಲೇ ನಾಲಾದ ತಡೆಗೋಡೆ ಎತ್ತರಿಸಿ ನೀರು ಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಹಾನಿಯಾದ ಮನೆ-ಅಂಗಡಿಗಳಿಗೆ ಪರಿಹಾರ ಧನ ವಿತರಣೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಹಾಗೂ ತಹಶೀಲ್ದಾರ್‌ ಶಶಿಧರ ಮಾಡ್ಯಾಳಗೆ ಮನವಿ ಸಲ್ಲಿಸಿದರು. ಗಂಗಾಧರ ಬಡಿಗೇರ, ನೂರಅಹ್ಮದ್‌, ಪಾರ್ವತಿ, ಹುಸೇನಬಿ, ಫೈರೋಜ ಮದ್ದೀನ್‌, ಹುಸೇನಸಾಬ್‌ ಮೊಮಿನ್‌, ಅಬ್ದುಲ್ರೆಹಮಾನ್‌ ಸೌದಾಗರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next