Advertisement
ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಆರಂಭಗೊಂಡ ರೈತರ ಪ್ರತಿಭಟನಾ ಮೆರವಣಿಗೆ ಮುಳಗುಂದ ನಾಕಾ, ಟಿಪ್ಪು ಸುಲ್ತಾನ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಇದಕ್ಕೂ ಮುನ್ನ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಉಪಾಧ್ಯಕ್ಷ ಬಸವರಾಜ ಬೆಳದಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳಿಂದಲೂ ರೈತರಿಗೆ ಅನ್ಯಾಯವಾಗಿದೆ. ಈ ಬಾರಿ ಜಿಲ್ಲಾದ್ಯಂತ ನಿರಂತರ ಮಳೆಯಿಂದಾಗಿ ಅತಿವೃಷ್ಟಿ ಆವರಿಸಿದೆ. ಪರಿಣಾಮ ಹೆಸರು,
Related Articles
Advertisement
ರೈತ ಮುಖಂಡ ನಾಗನಗೌಡ ಹಿರೇಮನಿ ಪಾಟೀಲ ಮಾತನಾಡಿ, ಬೆಳೆ ಪರಿಹಾರ ವಿತರಣೆಯಲ್ಲಿ ಗದಗ ತಾಲೂಕನ್ನು ಸರಕಾರ ಉದ್ದೇಶ ಪೂರ್ವಕವಾಗಿ ಕೈಬಿಟ್ಟಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನ ಹರಿಸಬೇಕು. ಶಾಸಕರು ನಗರಕ್ಕೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದಾರೆ. ಆದರೆ, ರೈತರಿಗೆ ಏನು ಮಾಡಿಲ್ಲ ಎಂದು ಆರೋಪಿಸಿದ ಅವರು, 8 ದಿನಗಳಲ್ಲಿ ರೈತರಿಗೆ ನ್ಯಾಯ ದೊರಕಿಸದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಬಸವರಾಜ ಕವಳಿಕಾಯಿ, ಕಾರ್ಯದರ್ಶಿ ಮೋಹನ ಇಮರಾಪೂರ, ರೈತ ಮುಖಂಡ ಎಂ.ಎಸ್. ಪರ್ವತಗೌಡ್ರ, ವಿರೂಪಾಕ್ಷಪ್ಪ ದೇಸಾಯಿಗೌಡ್ರ, ಎಂ.ಎಸ್. ಸಂಕನಗೌಡ್ರ, ನರಸಪ್ಪ ತುಕ್ಕಪ್ಪನವರ, ಬಸಪ್ಪ ಕಲಬಂಡಿ, ಬಸವರಾಜ ಹುಬ್ಬಳ್ಳಿ ವಿ.ಎಸ್.ಅಕ್ಕಿ, ಸಿದ್ದಲಿಂಗಪ್ಪ ಅರಳಿ, ಕರಬಸಯ್ಯ ನಲವತ್ವಾಡಮಠ, ಸೋಮು ಮುಳಗುಂದಸೇರಿದಂತೆ ತಾಲೂಕಿನ 58 ಗ್ರಾಮಗಳ ರೈತರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.