Advertisement

ಎಂಇಎಸ್‌ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

06:12 PM Dec 22, 2021 | Team Udayavani |

ಜಮಖಂಡಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಎಂಇಎಸ್‌ ಅವಮಾನ ಮಾಡಿದ್ದನ್ನು ಖಂಡಿಸಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

Advertisement

ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸುವ ಮೂಲಕ ಕೆಲಕಾಲ ಸಂಚಾರ ಸ್ಥಗಿತಗೊಳಿಸಿ ಎಂಇಎಸ್‌ ನಿಷೇಧಿಸಬೇಕೆಂದು ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟು ಹಾಕಿದ ಮತ್ತು ಸುಟ್ಟು ಹಾಕಲು ಕುಮ್ಮಕ್ಕು ನೀಡುತ್ತಿರುವರನ್ನು ಬಂಧಿಸದಿದ್ದರೆ ಮತ್ತು ಎಂಇಎಸ್‌ ಸಂಘಟನೆಯನ್ನು ನಿಷೇಧಿ ಸದಿದ್ದರೆ ಬೆಳಗಾವಿ ಚಲೋ ನಡೆಸಿ ಮುತ್ತಿಗೆ ಹಾಕಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮಂಜುನಾಥ ಜಕ್ಕಪ್ಪನವರ, ಸಿದ್ದು ಮೀಶಿ, ಬಸವರಾಜ ನ್ಯಾಮಗೌಡ, ಗಣೇಶ ಶಿರಗಣ್ಣವರ, ಭೀಮು ಕಮರಡಗಿ, ಸುನೀಲ ಭೋವಿ, ಶಂಕರ ಕಾಳೆ, ವಿಠuಲ ಪರೀಟ, ವಿನೋದ ಬಿರಾದಾರ, ನರೇಂದ್ರ ಮಾನೆ, ಶ್ರೀಶೈಲ ಜಂಬಗಿ, ರುದ್ರಯ್ಯ ಕರಡಿ, ಮಂಜುನಾಥ ಹಿರೇಮಠ, ಶ್ರೀಧರ ಕನ್ನೂರ, ವಿನೋದ ಲೋಣಿ, ಶ್ಯಾಮ ಗಣಾಚಾರಿ, ರಾಯಬಾ ಜಾಧವ, ಪ್ರದೀಪ ಮೆಟಗುಡ್ಡ, ರಾಹುಲ ಕಲೂತಿ, ಪ್ರಕಾಶ ಅರಕೇರಿ, ನಿಖೀಲ ನ್ಯಾಮಗೌಡ, ಬಸವರಾಜ ಹರಕಂಗಿ ,ಕುಮಾರ ಆಲಗೂರ, ಮೀರಾ ಒಂಟಮೂರಿ, ದೀಪಕ ಕದಮ, ನಿಂಗರಾಜ ಸಿಂಗಾಡಿ, ರವಿನಂದನ, ಪ್ರವೀಣ ಕಲ್ಯಾಣಿ, ಪ್ರಶಾಂತ ಗಾಯಕವಾಡ, ಶ್ರೀಶೈಲ ದೆಬಾಡಿ, ನವೀನ ಕಲೂತಿ, ಸಚಿನ್‌ ಬಿರಾದಾರ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next