Advertisement

ರೈತ ವಿರೋಧಿ ನೀತಿ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

11:33 AM Aug 11, 2020 | Suhan S |

ಹೊಳಲ್ಕೆರೆ: ಸರಕಾರದ ರೈತ ವಿರೋಧಿ ನೀತಿಗಳನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಕೆ.ನಾಗರಾಜ್‌ಗೆ ಮನವಿ ಪತ್ರ ಸಲ್ಲಿಸಿದರು.

Advertisement

ಸರಕಾರ ಜಾರಿಗೆ ತರಲು ಮುಂದಾಗಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಸಮುದಾಯಕ್ಕೆ ಮಾರಕವಾಗಿದ್ದು, ತಿದ್ದಪಡಿಯನ್ನು ವಾಪಸ್ಸು ಪಡೆದುಕೊಳ್ಳಬೇಕು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ತಮ್ಮ ಜಮೀನುಗಳನ್ನು ಬಂಡವಾಳಗಾರರ ಹಣದ ವ್ಯಾಮೋಹಕ್ಕೆ ಸಿಕ್ಕಿ ಕಳೆದುಕೊಳ್ಳಬೇಕಾಗುತ್ತದೆ. ತಕ್ಷಣವೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸುಪಡೆದುಕೊಳ್ಳಬೇಕೆಂದು ಒತ್ತಾಯಿಸಿದರು.

ವಿದ್ಯುತ್‌ ಕಾಯ್ದೆ ತಿದ್ದುಪಡಿಯಿಂದ ರೈತರ ಮೇಲೆ ಸಾಕು ದುಷ್ಟರಿಣಾಮ ಆಗಲಿದೆ. ವಿದ್ಯುತ್‌ ನಂಬಿ ಕೃಷಿ ಮಾಡುವ ರೈತರು ಅನ್ಯಾಯಕ್ಕೆ ತುತ್ತಾಗಲಿದ್ದಾರೆ. ಕೃಷಿಗೆ ಪೂರಕ ವಿದ್ಯುತ್‌ ಯೋಜನೆ ರೂಪಿಸಬೇಕು. ರೈತರಿಗೆ ಬೀಜದ ಹಕ್ಕು ನೀಡಬೇಕು. ಬೀಜದ ಹಕ್ಕು ಕಿತ್ತುಕೊಳ್ಳುವ ಸಂಚು ಸರಿಯಲ್ಲ. ಕೇಂದ್ರ ಸರಕಾರ ಬೀಜದ ಮೇಲಿನ ಹಕ್ಕುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳಿಗೆ ಹಕ್ಕು ನೀಡುತ್ತಿದೆ. ಇದರಿಂದ ಪಾರಂಪರಿಕ ಕೃಷಿ ಪದ್ದತಿಯ ಮೇಲಿನ ಹಕ್ಕುಗಳಿಗೆ ಧಕ್ಕೆಯಾಗಲಿದೆ. ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿಯನ್ನು ಸರಕಾರ ವಾಪಸು ಪಡೆಕೊಳ್ಳಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ, ಅಧ್ಯಕ್ಷರಾದ ಕೊಟ್ರೆ ಶಂಕ್ರಪ್ಪ, ಬಸವರಾಜಪ್ಪ, ಲೋಕೇಶ್‌, ಬಸವನಕೋಟೆ ನಾಗರಾಜಪ್ಪ, ಗವಿರಾಜ್‌. ಟಿ.ಜಿ.ಚಂದ್ರಹಾಸ್‌, ಕೆ.ಸಿ.ಪರಮೇಶ್ವರಪ್ಪ, ಡಿ.ರೇವಣಸಿದ್ದಪ್ಪ, ಶಂಕರಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next