ಸಿಂದಗಿ: ಪಟ್ಟಣದ ಹಣ್ಣು-ಹಂಪಲ ಮತ್ತು ತರಕಾರಿ ವ್ಯಾಪಾರಸ್ಥರಿಗೆ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಬುಧವಾರ ಎಲ್ಲ ವ್ಯಾಪಾರಸ್ಥರು ಮಾರಾಟ ವಹಿವಾಟು ಬಂದ್ ಮಾಡಿ ಹಣ್ಣು-ತರಕಾರಿಗಳನ್ನು ಬೀದಿಗೆ ಎಸೆದು ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪಿ ತಹಶೀಲ್ದಾರ್ ಎಂ.ಎಸ್. ಅರಕೇರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಹಳೆ ಎಸ್‌ಬಿಐ ವರೆಗೆ ಹಣ್ಣು-ಹಂಪಲ ಮತ್ತು ತರಕಾರಿ ಮಾರಾಟ ಮಾಡಲಾಗುತ್ತಿದ್ದು ಇದರಿಂದ ದಿನನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಅಂಗಡಿಕಾರರು ವ್ಯಾಪಾರಸ್ಥರಿಗೆ ಎದುರಿಗೆ ಕುಳಿತುಕೊಳ್ಳಲು ಬಿಡುವುದಿಲ್ಲ.
ರಸ್ತೆ ಮಧ್ಯದಲ್ಲಿ ವ್ಯಾಪಾರ ಮಾಡಿದರೆ ಪೊಲೀಸ್ ಇಲಾಖೆ ಸಿಬ್ಬಂದಿ ಲಾಟಿ ಎಟು ನೀಡುತ್ತಾರೆ. ಇದರಿಂದ ಬೀದಿ ವ್ಯಾಪಾರ ಗೋಳು ಹೇಳತೀರದಾಗಿದೆ. ಬೀದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡಬೇಕು. ತಾಪಂ ವ್ಯಾಪ್ತಿಯಲ್ಲಿನ 1456-1ರ ಸರ್ವೇ ನಂಬರಿನ ಆಸ್ತಿ ಜಾಗೆಯನ್ನು (ಹಳೆ ಪ್ರವಾಸಿ ಮಂದಿರ) ವ್ಯಾಪಾರಕ್ಕಾಗಿ ಪುರಸಭೆ ನಿರ್ಮಾಣ ಮಾಡಿ ವ್ಯಾಪರಕ್ಕೆ ಅನುಕೂಲ ಮಾಡಿಕೊಡಬೇಕು. ವ್ಯಾಪಾರಕ್ಕೆ ಸೂಕ್ತ ಜಾಗೆ ನೀಡುವಂತೆ ಪುರಸಭೆಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲ ದಿನಗಳಲ್ಲಿ ವ್ಯಾಪಾರಕ್ಕೆ ಜಾಗೆ ನೀಡದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿದರು.
ನಬೀಲಾಲ್ ಗೋಳಸಾರ, ಇಕಬಾಲ ತಲಕಾರಿ, ಗುಲಾಮಸಾಬ ಮರ್ತೂರ, ಶಬ್ಬೀರ ನಾಟೀಕರ, ಮಮ್ಮದ ಅಳ್ಳಾಳೆ, ಅಕºರಸಾಬ ನಾಟೀಕರ, ಜಿಲಾನಿ ನಾಟೀಕಾರ, ಇಮಾಮಸಾಬ ಹಳ್ಳೂರ, ಬುಡ್ಡೇಸಾಬ ಮರ್ತೂರ, ಹೆ„ದರ ಅಳಂದ ಆಶಾಬಿ ಮರ್ತೂರ, ಸದಾಶಿವ ಸುಣಗಾರ, ಶೀತವ್ವ ಮಾದರ, ಮೌಲಾಸಾಬ ಹಳ್ಳೂರ, ಪರಶು ಕಟ್ಟಿಮನಿ, ಶಿವಾನಂದ ಬಿರಾದಾರ, ಬುಡ್ಡೇಸಾ ನಾಟೀಕಾರ, ಇಸ್ಮಾಯಿಲ್ ನಾಟೀಕಾರ, ಜ್ಯೋತಿ ಕನ್ನೋಳ್ಳಿ, ಅವಮ್ಮ ಬಿರಾದಾರ, ನೀಲಮ್ಮಯಾಳಗಿ, ಮಲ್ಲಣ್ಣ ನಾಯೋಡಿ, ರತ್ನಾಬಾಯಿ ದೊರೆ, ಬಾಷಾ ಬನ್ನೇಟ್ಟಿ, ಎಂ.ಎಸ್.ಬಮ್ಮನಜೊಗಿ, ಬಗವಂತ್ರಾಯ ಬಿರಾದಾರ ಇದ್ದರು.