Advertisement
ಪಟ್ಟಣದಲ್ಲಿ ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ ಅಂದೋಲಾ ಮಾತನಾಡಿ, ಈ ಸಲದ ಬಜೆಟ್‌ನಲ್ಲಿ ಎಲ್ಲ ವಿದ್ಯಾಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ಜಾರಿಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. 20 ದಿನಗಳ ಹಿಂದೆ ಉಪಮುಖ್ಯಮಂತ್ರಿಗಳು ಉಚಿತ ಬಸ್ ಪಾಸ್ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಮನ್ವಯ ಸಮಿತಿ ಸಭೆ ನಂತರ ಘೋಷಿಸಿದ್ದರು. ಆದರೆ ರಾಜ್ಯ ಸರ್ಕಾರ ತನ್ನ ಮಾತು ಉಳಿಸಿಕೊಳ್ಳದೆ ವಿದ್ಯಾರ್ಥಿಗಳಿಗೆ ವಿಶ್ವಾಸ ದ್ರೋಹ ಎಸಗಿದೆ ಎಂದು ಆರೋಪಿಸಿದರು.
ವಾಡಿ: ಸರಕಾರ ಜಾತಿ ಹುಡುಕದೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್
(ಎಐಡಿಎಸ್‌ಒ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿಎವೈಒ) ಪಟ್ಟಣದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ನಡೆಸಿದವು.
Related Articles
Advertisement
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಮೀಪದ ಪಟ್ಟಣ, ಹೋಬಳಿ ಅಥವ ನಗರ ಪ್ರದೇಶಗಳಿಗೆ ಬರುವುದು ಸಾಮಾನ್ಯ. ಅಲ್ಲದೆ ನಗರಗಳಲ್ಲಿ ದೂರದ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಬಸ್ ಪ್ರಯಾಣಕ್ಕೆ ಸಾಕಷ್ಟು ಹಣ ಖರ್ಚು ಮಾಡಬೇಕಾದ ಸ್ಥಿತಿಯಿದೆ. ಇಂಥಹ ಸಂದರ್ಭದಲ್ಲಿ ಸರಕಾರ ಜಾತಿ ಲೆಕ್ಕಾಚಾರದಡಿ ಉಚಿತ ಬಸ್ ಪಾಸ್ ಕೊಡುವುದು ಸರಿಯಲ್ಲ. ಎಲ್ಲ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ನಾಲವಾರ ನಾಡಕಚೇರಿ ಉಪ ತಹಶೀಲ್ದಾರ ಮಲ್ಲಿಕಾರ್ಜುನ ಮನವಿ ಸ್ವೀಕರಿಸಿದರು. ಎಐಡಿಎಸ್‌ಒ ವಾಡಿ ನಗರ ಸಮಿತಿ ಅಧ್ಯಕ್ಷ ಶರಣು ಹೇರೂರ, ಎಐಡಿಎಸ್‌ಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ್, ಎಐಡಿವೈಒ ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ, ಕಾರ್ಯದರ್ಶಿ ಶರಣು ವಿ.ಕೆ., ಉಪಾಧ್ಯಕ್ಷ ರಾಜು ಒಡೆಯರಾಜ, ಶ್ರೀಶರಣ ಹೊಸಮನಿ, ಗೌತಮ ಪರತೂರಕರ, ವೆಂಕಟೇಶ ಆರ್.ಜಿ., ಅರುಣಕುಮಾರ ಹಿರೆಬನಾರ, ಬಸವರಾಜ ನಾಟೇಕರ, ಗೋವಿಂದ ಹೆಳವರ ಪಾಲ್ಗೊಂಡಿದ್ದರು.