Advertisement

ಕಡಬ: ಐತ್ತೂರು ಗ್ರಾಮದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

02:31 PM Mar 16, 2021 | Team Udayavani |

ಕಡಬ: ಐತ್ತೂರು ಗ್ರಾಮದ ಮೂಜುರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ರಾತ್ರೋರಾತ್ರಿ ನುಗ್ಗಿ ದಾಂಧಲೆ ನಡೆಸಿದ್ದಾರೆ ಎನ್ನುವ ಆರೋಪದಲ್ಲಿ ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಗ್ರಹಿಸಿ ಕಡಬ ತಹಶಿಲ್ದಾರ್ ಕಛೇರಿ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

Advertisement

ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್ ಟಿ. ಅವರ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪ್ರಸಾದ್ ಅವರ ಪತ್ನಿ, ತಾಯಿ, ತಂದೆ, ಸಹೋದರ ಮತ್ತಿತರರು ಭಾಗವಹಿಸಿದ್ದಾರೆ.

ಇದನ್ನೂ ಓದಿ:ತೆಂಗಿನಕಾಯಿ ಕೀಳಲುಹೋದ ಯುವಕ ನಿಯಂತ್ರಣ ತಪ್ಪಿ ಮರದಿಂದ ಬಿದ್ದು ಸಾವು!

ಉಪವಾಸ ಸತ್ಯಾಗ್ರಹ ಪ್ರಾರಂಭವಾಗಿ ಇಪ್ಪತ್ನಾಲ್ಕು ಗಂಟೆ ಕಳೆದಿದೆ. ಕಡಬ ತಹಶಿಲ್ದಾರ್, ಕಡಬ ಪೊಲೀಸ್ ಠಾಣಾಧಿಕಾರಿಯವರು ಸ್ಥಳಕ್ಕೆ ಬಂದು ಮನವೊಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎನ್ನುವ ಆರೊಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next