Advertisement

ಹದಗೆಟ್ಟ ರಸ್ತೆ: ನಾಗರಿಕರಿಂದ ಪ್ರತಿಭಟನೆ

10:53 AM Sep 19, 2022 | Team Udayavani |

ಕಿನ್ನಿಗೊಳಿ: ಪಕ್ಷಿಕೆರೆಯಿಂದ ಸುರಗಿರಿ ರಸ್ತೆಯು ಅಕ್ರಮ ಮರಳು ಸಾಗಾಟದ ವಾಹನಗಳಿಂದ ತೀವ್ರ ಕೆಟ್ಟು ಹೋಗಿದ್ದು ಕೂಡಲೇ ಸರಿಪಡಿಸುವಂತೆ ಅತ್ತೂರು ಪಡ್ಪುವಿನಲ್ಲಿ ಅತ್ತೂರು ಹಾಗೂ ಕೆಮ್ರಾಲ್‌ ಗ್ರಾಮಸ್ಥರ ಬೃಹತ್‌ ಪ್ರತಿಭಟನೆ ಸೆ. 18 ರಂದು ನಡೆಯಿತು.

Advertisement

ಪ್ರತಿಭಟನೆಯಲ್ಲಿ ಸ್ಥಳೀಯರಾದ ಪ್ರಸನ್ನ ಶೆಟ್ಟಿ ಅತ್ತೂರುಗುತ್ತು ಮಾತನಾಡಿ, ರಾತ್ರೋರಾತ್ರಿ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟದ ಲಾರಿಗಳು ಸಂಚರಿಸುತ್ತಿದ್ದು ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸುಸ್ಥಿತಿಯಲ್ಲಿದ್ದ ರಸ್ತೆ ಮರಳುಗಾರಿಕೆ ವಾಹನಗಳಿಂದ ತೀವ್ರ ಕೆಟ್ಟು ಹೋಗಿದ್ದು ಅನೇಕ ಅಪಘಾತಗಳು ಸಂಭವಿಸಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಗರಿಕ ಚರಣ್‌ ಶೆಟ್ಟಿ ಮಾತನಾಡಿ, ಸುರತ್ಕಲ್‌ ಪೊಲೀಸ್‌ ಠಾಣೆಯ ಗಡಿಭಾಗವಾದ ಶಿಬರೂರು ಕಡೆಯಿಂದ ಅಕ್ರಮ ಮರಳುಗಾರಿಕೆಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಮುಂದಿನ 15 ದಿನಗಳ ಒಳಗಡೆ ರಸ್ತೆ ದುರಸ್ತಿ ಹಾಗೂ ಅಕ್ರಮ ಮರಳು ಸಾಗಾಟದ ವಾಹನಗಳನ್ನು ನಿಯಂತ್ರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಸ್ಥಳೀಯ ನಾಗರಿಕರು ಮರಳುಗಾರಿಕೆಯ ವಾಹನಗಳನ್ನು ನಿಯಂತ್ರಿಸುವಂತೆ ಪೊಲೀಸರಿಗೆ ಮನವಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಳಿಕ ಪಂಚಾಯತ್‌ ಅಧ್ಯಕ್ಷರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಪಂಚಾಯತ್‌ ಸದಸ್ಯ ಮಯ್ಶದ್ದಿ ಮಾತನಾಡಿ, ಇದು ಜಿಲ್ಲಾ ಪಂಚಾಯತಿಗೆ ಸೇರಿದ ರಸ್ತೆಯಾಗಿದ್ದು ಅವರಿಗೆ ದುರಸ್ತಿಗೆ ಮನವಿ ಸಲ್ಲಿಸಲಾಗುವುದು ಎಂದರು.

Advertisement

ಈ ನಡುವೆ ಅಕ್ರಮ ಮರಳುಗಾರಿಕೆುಂದ ರಸ್ತೆ ಹಾಳಾಗಿದ್ದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಹಿತಿ ತಿಳಿದ ದಂಧೆಕೋರರು ತಾತ್ಕಾಲಿಕ ನೆಲೆಯಲ್ಲಿ ಹೊಂಡ ರಸ್ತೆಗೆ ಭಾರೀ ಗಾತ್ರದ ಜಲ್ಲಿ ಹಾಕಿ ರಸ್ತೆ ಮತ್ತಷ್ಟು ಹದಗೆಡುವಂತೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಹಿತಕರ ಘಟನೆಗಳು ನಡೆಯದಂತೆ ಪ್ರತಿಭಟನೆ ನಡೆಯುವ ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದರು. ಮನವಿ ಸಲ್ಲಿಸಲಾಗುವುದು ಈ ಸಂದರ್ಭ ಪಂಚಾಯತ್‌ ಅಧ್ಯಕ್ಷೆ ಲೀಲಾ ಕೃಷ್ಣಪ್ಪ ಮಾತನಾಡಿ ಅಕ್ರಮ ಮರಳುಗಾರಿಕೆ ವಾಹನಗಳು ಸಂಚರಿಸುವ ಬಗ್ಗೆ ಲಿಖಿತ ದೂರುಗಳು ಇದುವರೆಗೂ ಬಂದಿಲ್ಲ. ಮುಂದಕ್ಕೆ ಈ ಬಗ್ಗೆ ಗಣಿ ಇಲಾಖೆ, ಶಾಸಕರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next