ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ನಡೆಸಿದ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಯಮಿತ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಆಗಮಿಸಿದ್ದರು. ಪ್ರಮುಖ ಬೇಡಿಕೆಗಳಾದ ಗುತ್ತಿಗೆದಾರರಿಗೆ 1 ಲಕ್ಷದಿಂದ 5 ಲಕ್ಷದವರೆಗೆ ವಿದ್ಯುತ್ ಕಾಮಗಾರಿಗಳ ತುಂಡು ಗುತ್ತಿಗೆಯಾಗಿ ನೀಡಬೇಕು, ವಸತಿ, ವಾಣಿಜ್ಯ ಕೈಗಾರಿಕೆ ಇತರೆ ಕಟ್ಟಡಗಳ ವಿದ್ಯುತ್ ಸಂಪರ್ಕಕ್ಕೆ ಓಸಿ ಸಲ್ಲಿಸುವಂತೆ ಕೇಳುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಗಂಗಾ ಕಲ್ಯಾಣ, ಕುಡಿಯುವ ನೀರು, ಸರ್ವಿಸ್ ಮೇನ್ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್ ಮೊತ್ತದ ಟೆಂಡರ್ ಕೆಲವು ಬಂಡವಾಳಶಾಹಿ ಗುತ್ತಿಗೆದಾರರಿಗೆ ನೀಡುತ್ತಿರುವುದನ್ನು ಕೂಡಲೇ ಕೈ ಬಿಡಬೇಕು, ಖಾಸಗೀಕರಣ ಆಗದಂತೆ ತಡೆಯಬೇಕು, ಅತಿವೃಷ್ಟಿ-ಅನಾವೃಷ್ಟಿ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದಾಗ ಅಂದಾಜು ಪಟ್ಟಿಪಡೆಯದೇ ಸ್ಥಳೀಯ ಗುತ್ತಿಗೆದಾರರಿಂದ ಕೆಲಸಮಾಡಿಸಿಕೊಂಡು ಕೋಟ್ಯಂತರ ರೂ.ಗಳ ಬಾಕಿಉಳಿಸಿಕೊಂಡಿರುವುದು ಕೂಡಲೇ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ಮುಂಚಿತ ಮಾಹಿತಿ ನೀಡಿ ಕಚೇರಿಗೆ ಆಗಮಿಸಿದರೂ ವ್ಯವಸ್ಥಾಪಕ ನಿರ್ದೇಶಕರಿಲ್ಲದೇ ಇರುವುದನ್ನು ಖಂಡಿಸಿ ಗುತ್ತಿಗೆದಾರರು ಕೆಲವು ಹೊತ್ತು ಪ್ರತಿಭಟನೆ ನಡೆಸಿದರು.
ನಂತರ ಆಗಮಿಸಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನಿರಾಜು ಅವರು, ಗುತ್ತಿಗೆದಾರರ ಸಮಸ್ಯೆ ಆಲಿಸಿ, ಬೃಹತ್ ಟೆಂಡರ್ ಪ್ರಕ್ರಿಯೆಯನ್ನು ತಡೆದು ತುಂಡು ಗುತ್ತಿಗೆ ನೀಡಲಾಗುವುದು. 1 ಲಕ್ಷದಿಂದ 5 ಲಕ್ಷ ರೂ. ಗಳವರೆಗೆ ಗುತ್ತಿಗೆದಾರರಿಗೆ ಸಣ್ಣ ಕಾಮಗಾರಿ ನೀಡಲಾಗುವುದೆಂದು ಭರವಸೆ ನೀಡಿದರು. ನಂತರ ಇನ್ನಿತರೆ ಸಮಸ್ಯೆಗಳ ಕುರಿತು ಪರಿಶೀಲನೆನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಂಘದ ರಾಜ್ಯಾಧ್ಯಕ್ಷ ಎಸ್.ಎಂ.ಕೃಷ್ಣ, ಉಪಾಧ್ಯಕ್ಷ ವಿಜಯಕುಮಾರ, ಗೌರವಾಧ್ಯಕ್ಷ ರಾಮಣ್ಣ ಮುತ್ತಗಿ, ಎನ್.ಎಂ.ರೇಶಮವಾಲೆ, ಪ್ರಸನ್ನ ತಳವಾರ, ತಿಪ್ಪಣ್ಣ ವಾಲಿಕಾರ, ತುಷಾರ ಬದ್ದಿ, ಶರಣಬಸಪ್ಪ ಜಾಡರ, ರಮೇಶ ಚವ್ಹಾಣ,ಗುರುಶಿದ್ದಪ್ಪ ಬುರ್ಲಬಡ್ಡಿ, ಮಂಜುನಾಥಮಣ್ಣೆನವರ, ಆರ್.ಎಂ.ಕುಂಠೆ, ರವಿ ಉಪ್ಪಿನ, ಮೃತ್ಯುಂಜಯ ಹಿರೇಮಠ, ಸಿದ್ದರಾಮ ಹಾಲಹಳ್ಳಿ, ಕಿರಣ ಹಿರೇಮಠ ಸೇರಿದಂತೆ ಇನ್ನಿತರರಿದ್ದರು.