Advertisement

ರೈತ ಸಂಘದಿಂದ ಪ್ರತಿಭಟನೆ

04:51 PM Jul 07, 2020 | Suhan S |

ಜಗಳೂರು: ಕೃಷಿಹೊಂಡ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸಹಾಯಧನ ಮತ್ತು ತಾಡಪಾಲ್‌ ವಿತರಣೆ ಮಾಡದೆ ರೈತರು ಕೃಷಿ ಇಲಾಖೆಗೆ ಅಲೆದಾಡುವಂತಾಗಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚಂಗಿಪುರ ರೇವಣಸಿದ್ದಪ್ಪ ಬಣ) ವತಿಯಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ರೈತ ಸಂಘದ ರಾಜ್ಯಾಧ್ಯಕ್ಷ ರೇವಣಸಿದ್ದಪ್ಪ ಮಾತನಾಡಿ, ಜಗಳೂರು ತಾಲೂಕಿನಲ್ಲಿ 2018-19ನೇ ಸಾಲಿನಲ್ಲಿ ಕೆಲವು ಗ್ರಾಮಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ವರ್ಷ ಕಳೆದಿದೆ. ಆದರೂ ಕೆಲವು ರೈತ ಫಲಾನುಭವಿಗಳಿಗೆ ಸಹಾಯಧನ ನೀಡಿಲ್ಲ ಮತ್ತು ಹೊಂಡ ನಿರ್ಮಿಸಿಕೊಂಡ ರೈತರಿಗೆ ಮಳೆ ಬಂದಾಗ ಹೊಂಡದಲ್ಲಿ ಸಂಗ್ರಹವಾದ ನೀರು ಇಂಗದಂತೆ ಸಂರಕ್ಷಿಸಿಕೊಳ್ಳಲು ತಾಡಪಾಲು ಮತ್ತು ಮಳೆ ಕೈಕೊಟ್ಟಾಗ ಬೆಳೆಗೆ ನೀರು ಹಾಯಿಸಿಕೊಳ್ಳಲು ಡಿಸೇಲ್‌ ಇಂಜಿನ್‌ ಮತ್ತು ಸ್ಪ್ರಿಂಕ್ಲರ್‌ ಸೆಟ್‌ ಪರಿಕರಗಳನ್ನು ವಿತರಣೆ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಆರೋಪಿಸಿದರು.

ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಓಬಳೇಶ್‌ ಮಾತನಾಡಿ, ಕಳೆದ ಸಾಲಿನಲ್ಲಿ ಜಗಳೂರು ಬರಪೀಡಿತ ಪ್ರದೇಶವಾಗಿದ್ದು ಮಳೆ ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಅಲ್ಪ ಸ್ವಲ್ಪ ಬೆಳೆದ ರೈತರು ಬೆಳೆ ವಿಮೆಯನ್ನು ಕಟ್ಟಿದ್ದರೂ ಇದುವರೆಗೂ ರೈತರ ಖಾತೆಗೆ ಬೆಳೆ ವಿಮೆ ಹಣ ಪಾವತಿಯಾಗಿಲ್ಲ. ಇದರಿಂದಾಗಿ ಬಿತ್ತನೆಗೆ ಬೀಜ, ಗೊಬ್ಬರ ಖರೀದಿಸಲು ಖಾಸಗಿ ದಲ್ಲಾಳಿ ಅಂಗಡಿಗಳ ಮೊರೆ ಹೋಗುವಂತಾಗಿದೆ. ಆದ್ದರಿಂದ ಕೂಡಲೇ ವಿಮೆ ಹಣವನ್ನು ಪಾವತಿ ಮಾಡುವಂತೆ ಆಗ್ರಹಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ನಿಂಗಪ್ಪ, ಚಂದ್ರ ನಾಯ್ಕ, ಬಸವರಾಜಪ್ಪ, ಜಯಣ್ಣ, ಶಿವಾನಂದಪ್ಪ, ಲಂಕೇಶ ನಾಯ್ಕ, ಮುಸ್ಟೂರಪ್ಪ, ಚಂದ್ರಪ್ಪ, ಎಂ. ಕೃಷ್ಣಪ್ಪ, ನಾಗಪ್ಪ, ಶ್ರೀನಿವಾಸ, ಹನುಮಂತಪ್ಪ, ವಾಜೀದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next