Advertisement

ಹಣಸೂರು: ಕಾಮಗಾರಿಗೆ ಚಾಲನೆ ವೇಳೆ ಬಿಜೆಪಿಗರ ಪ್ರತಿಭಟನೆ; ಗರಂ ಆದ ಕೈ ಕಾರ್ಯಕರ್ತರು

04:15 PM Mar 15, 2023 | Team Udayavani |

ಹಣಸೂರು: ಬಿಜೆಪಿಗರ ಪ್ರತಿಭಟನೆ ನಡವೆಯೇ 18.50 ಕೋಟಿರೂ ವೆಚ್ಚದ ನಗರೋತ್ಥಾನ ಯೊಜನೆ ಕಾಮಗಾರಿಗೆ ಶಾಸಕ ಹೆಚ್.ಪಿ. ಮಂಜುನಾಥ್ ಚಾಲನೆ ನೀಡಿದರು.

Advertisement

ನಗರಸಭೆವತಿಯಿಂದ ನಗರದ ಕಲ್ಕುಣಿಕೆ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯ ಕ್ರಮಕ್ಕಾಗಮಿಸಿದ ಶಾಸಕ ಮಂಜುನಾಥ್ ಭೂಮಿ ಪೂಜೆ ನೆರವೇರಿಸರಿದರು. ಈವೇಳೆ ಸ್ಥಳಕ್ಕಾಗಮಿಸಿದ ತಾಲೂಕು ಬೆಜೆಪಿ ಅಧ್ಯಕ್ಷ ನಾಗಣ್ಣ ಗೌಡ. ನಗರ ಅಧ್ಯಕ್ಷ ಗಣೇಶಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್, ನಗರಸಭೆ ನಾಮ ನಿರ್ಧೇಶನ ಸದಸ್ಯರಾದ ಶ್ರೀನಿವಾಸ್, ರಮೇಶ್, ಅರುಣ್ ಚೌವ್ಹಾಣ್.ವಿ.ಪಿ.ಸಾಯಿನಾಥ್ ಮತ್ತಿತರರು ಸರಕಾರಿ ಕಾರ್ಯಕ್ರಮದಲ್ಲಿ ಪ್ರೋಟೋ ಕಾಲ್ ಅನುಸರಿಸಿಲ್ಲ, ಹೀಗಾಗಿ ಕಾಮಗಾರಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಮುಂದೆ ಬಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದಕುಮಾರ್ ರವರು ಶಾಸಕರು ಪೂಜೆ ನೆರವೇರಿಸಿದ ನಂತರ ಹಿಡಿದುಕೊಂಡಿದ್ದ ಹಾರೆಯನ್ನು ಕೊಡಬೇಕೆಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಂತೆ ಶಾಸಕ ಮಂಜುನಾಥರು ವಿರೋಧಿಸುವುದಾದರೆ ವಿರೋಧಿಸಿ. ಅಭಿವೃದ್ದಿ ಕೆಲಸಕ್ಕೆ ತಡೆಯೊಡ್ಡುವುದು ತರವಲ್ಲವೆಂದು ಎಚ್ಚರಿಸಿದರೂ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿ ಸರಕಾರದ ವಿರುದ್ದ ಧಿಕ್ಕಾರ ಮೊಳಗಿಸಿದರು. ಈವೇಳೆ ತಳ್ಳಾಟ,  ನೂಕಾಟ ಸಹ‌ ನಡೆಯಿತು. ಮದ್ಯಪ್ರವೇಶಿಸಿದ ಪೋಲೀಸರು ಎರಡೂ ಕಡೆಯವರನ್ನು ಸಮಾಧಾಸಿದರೂ ತಳ್ಳಾಟ, ಕೂಗಾಟ ನಡೆಯುತ್ತಲೇ ಇತ್ತು.

ಕಾಂಗ್ರೆಸ್ ಕಾರ್ಯಕರ್ತರು ಪರ ವಿರೋದ ಘೋಷಣೆ ಕೂಗುತ್ತಲೇ ಇದ್ದರು. ಕಾಮಗಾರಿಗೆ ಚಾಲನೆ ನೀಡಿದ್ದ ಶಾಸಕ ಮಂಜುನಾಥ್,ಕಾಮಗಾರಿ ಮಾಹಿತಿ ನೀಡಿ ನಗರೋತ್ಥಾನ ಯೋಜನೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಕಾಲದಲ್ಲಿ ಆರಂಭವಾಗಿದ್ದು, ಇದೀಗ ಅಮೃತ ಮಹೋತ್ಸವ ಹೆಸರು ಸೇರಿಸಿದ್ದಾರಷ್ಟೆ 8 ತಿಂಗಳ ಹಿಂದೆಯೇ ಆರಂಭಿಸಬೇಕಿತ್ತು ಆದರೆ ತಮ್ಮ ಅವಧಿಯಲ್ಲಿ ಆರಂಭವಾಗುವುದೆಂಬ ಕಾರಣದಿಂದ ಸಣ್ಣಪುಟ್ಟ ಕಾರಣ ಹೇಳಿ ಮುಂದೂಡುತ್ತಲೇ ಬಂದಿದ್ದು. ಕೊನೆಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ, ನಗರಾಭಿವೃದ್ದಿ ಇಲಾಖೆಯ ಅಜಯ್ ನಾಗಭೂಷಣ್ ಇತರೆ ಅಧಿಕಾರಿಗಳ ಬದ್ದತೆ, ಸಹಕಾರದಿಂದ ಕಾಮಗಾರಿ ಕೊನೆಗೂ ಆರಂಭಿಸಲಾಗುತ್ತಿದೆ ಎಂದರು.

Advertisement

ಬಿಜೆಪಿ ಸರಕಾರದ ಅನುದಾನವನ್ನು ಕಾಂಗ್ರೆಸ್ ಶಾಸಕ ಮಂಜುನಾಥರು ಭೂಮಿ ಪೂಜೆ ಮಾಡುತ್ತಿದ್ದಾರೆ. ಆದರೆ ಸಂಸದ ಪ್ರತಾಪ್ ಸಿಂಹ, ಎಂಎಲ್ ಸಿ ವಿಶ್ವನಾಥ್ ಅವರನ್ನೂ ಕರೆಯಬೇಕಿತ್ತು.ಶಾಸಕರು ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದರು.

ಆರೋಪದಲ್ಲಿ ಹುರಳಿಲ್ಲ
9 ತಿಂಗಳಿನಿಂದ ಮುಂದೂಡುತ್ತಾ ಬಂದಿದ್ದೇವೆ. ಜನರು ಉಗಿಯುತ್ತಿದ್ದಾರೆ. ಈಯೋಜನೆಗೆ ಮುಖ್ಯ ಮಂತ್ರಿಗಳು ಮೈಸೂರಲ್ಲಿ ಚಾಲನೆ ನೀಡಿದ್ದಾರೆ. ಈಗ ಆರಂಭಸಲಾಗುತ್ತಿದೆಯಷ್ಟೆ ಪೋಟೋಕಾಲ್ ಪ್ರಕಾರವೇ ನಡೆಸಲಾಗಿದೆ. ವಿನಾಕಾರಣ ಬಿಜೆಪಿಯವರು ತಕರಾರು ತೆಗೆದಿದ್ದಾರೆ. ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆಂದು ಶಾಸಕ ಮಂಜುನಾಥ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next