ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಆ.31 ರಂದು ರಾತ್ರಿ ಕನಕದಾಸ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿಗಳಿಗೆ ಕೆಸರು ಎರಚಿ ಅಪಮಾ ಮಾಡಿದ ಘಟನೆ ಜರುಗಿದೆ. ಕೃತ್ಯಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂಡಿ ಪಟ್ಟಣದಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಉಪ ತಹಸೀಲ್ದಾರ ಎಸ್.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಹಂಜಗಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ಮತ್ತು ರಾಣಿ ಚನ್ನಮ ಹಾಗೂ ಭಕ್ತ ಕನಕದಾಸರ ಬಾವ ಚಿತ್ರಕ್ಕೆ ಕೆಸರು ಎರಚಿ ಅವಮಾನ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸಿ, ಕಾನೂನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ತಾಲೂಕಾ ಅಧ್ಯಕ್ಷರ ಬಿ.ಡಿ. ಪಾಟೀಲ, ಪಂಚಮಚಸಾಲಿ ಸಮಾಜದ ಅಧ್ಯಕ್ಷ ಸೋಮು ದೇವರ, ಮಂಜು ಕಾಮಗೊಂಡ, ಮಹಿಬು ಬೇನೂರ, ರೇವಣಸಿದ್ಧ ಗೋಡಕೆ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಾಲುಮತ ಮಹಾಸಭದ ತಾಲೂಕ ಅಧ್ಯಕ್ಷರು ಮಾಳು ಮ್ಯಾಕೇರಿ ಸಿದ್ದು ಡಂಗಾ, ಶ್ರೀಶೈಲ ಪೂಜಾರಿ ವಿಠ್ಠಲ್ ಹಳ್ಳಿ ಸೈಬಗೌಡ ಪಾಟೀಲ ನಾನಾಗೌಡ ಪಾಟೀಲ ದೇವೇಂದ್ರ ಕುಂಬಾರ ಜಕ್ಕು ಪೂಜಾರಿ ನಾರಾಯಣ ವಾಲಿಕಾರ ಕುಮಾರ ಸುರಗಿಹಳ್ಳಿ ಗೋಪಾಲ ಸುರಪುರ ರವಿ ಸಿಂಧೇ ಸಂಜು ಪೈಕಾರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು