Advertisement

ಪಿಎಸ್‌ಐ ದೌರ್ಜನ್ಯ ಖಂಡಿಸಿ ಪ್ರತಿಭಟನೆ

03:35 PM Jun 12, 2022 | Team Udayavani |

ಸಕಲೇಶಪುರ: ಯಸಳೂರು ಗ್ರಾಮಾಂತರ ಠಾಣೆ ಎಸ್‌ಐ ಬ್ಯಾಟರಾಯನಗೌಡ ವಿನಃ ಕಾರಣ ಭಜರಂಗ ದಳ ಕಾರ್ಯಕರ್ತನೋರ್ವನ ಮನೆಗೆ ರಾತ್ರೋರಾತ್ರಿ ನುಗ್ಗಿ ಗೂಂಡ ವರ್ತನೆ ತೋರಿದ್ದಾರೆಂದು ಆರೋಪಿಸಿ ಭ ಜರಂಗದಳದ ಕಾರ್ಯಕರ್ತರು ಪಟ್ಟಣದ ಡಿವೈಎಸ್‌ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಭಜರಂಗದಳ ರಾಜ್ಯ ಸಹ ಸಂಚಾಲಕ ರಘು ಸಕಲೇಶಪುರ ಮಾತನಾಡಿ, ಯಸಳೂರು ಗ್ರಾಮಾಂತರ ಪೊಲೀಸ್‌ ಎಸ್‌ಐ ಬ್ಯಾಟರಾಯನಗೌಡ ಹಾಗೂ ನಗರಠಾಣೆ ಸಹಾಯಕ ಎಸ್‌ಐ ಲೂಯಿಸ್‌ ಎಂಬುವವರು ಭಜರಂಗದಳದ ಕಾರ್ಯಕರ್ತರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಶುಕ್ರವಾರ ತಡರಾತ್ರಿ ಸುಮಾರು 2.40ರ ವೇಳೆಗೆ ಕುಶಾಲನಗರ ಬಡಾವಣೆಯಲ್ಲಿರುವ ಭಜರಂಗದಳದ ಕಾರ್ಯಕರ್ತ ರಘು ನಾಗರಾಜ್‌ ಎಂಬು ವರ ಮನೆ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ ಮಹಿಳೆ ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಅಲ್ಲದೇ ಮನೆಯಲ್ಲಿದ್ದ ಎಲ್ಲರ ಮೇಲೂ ದರ್ಪ ತೋರಿ ಕಾರ್ಯಕರ್ತರ ಸ್ಥೈರ್ಯ ಕುಂದಿಸಲು ಪ್ರಯತ್ನ ಮಾಡಿದ್ದಾರೆ. ಇವರು ತಡರಾತ್ರಿ ದಾಳಿ ನಡೆಸಲು ಕಾರಣ ಏನು? ರಘು ನಾಗರಾಜ್‌ ಮನೆಗೆ ದಾಳಿ ನಡೆಸುವ ಸಂದರ್ಭದಲ್ಲಿ ಕೆಲವು ಪೋಲಿಸರು ಮದ್ಯಪಾನ ಮಾಡಿದ್ದರು ಎಂಬ ಶಂಕೆಯಿದ್ದು ಇವರನ್ನು ಕೂಡಲೇ ವೈದ್ಯಕೀಯ ತಪಾಸ ಣೆಗೆ ಒಳಪಡಿಸಬೇಕು. ಹಾಗೂ ಇವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಬೇಕು. ಈ ಹಿಂದೆ ಬ್ಯಾಟರಾಯನ ಗೌಡ ಹಲವು ಅಕ್ರಮ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದಾರೆಂಬ ಮಾಹಿತಿಯಿದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳದ ಪಕ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಡಿವೈಎಸ್‌ಪಿ ಅನುಪಸ್ಥಿತಿಯಲ್ಲಿ ವೃತ್ತ ನಿರೀಕ್ಷಕ ಚೈತ ನ್ಯರವರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಭಜರಂದಳದ ಕೌಶಿಕ್‌, ಅಗ್ರಹಾರ ರಮೇಶ್‌, ಮಂಜು, ಶಿವು, ಕಾರ್ತಿಕ್‌, ಗುರು, ಶೇಖರ್‌ ಪೂಜಾರಿ ಸೇರಿದಂತೆ ಇನ್ನು ಹಲವು ಕಾರ್ಯಕರ್ತರು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next