ಮಳವಳ್ಳಿ: 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಆರೋ ಪಿಯನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿ ಶುಕ್ರವಾರವೂ ವಿವಿಧ ಸಂಘ- ಸಂಸ್ಥೆಗಳಿಂದ ಪ್ರತಿಭಟಿಸಲಾಯಿತು.
ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಮುಸ್ಲಿಂ ಸಂಘಟನೆಗಳ ಪದಾಧಿ ಕಾರಿಗಳು ಮೆರವಣಿಗೆ ಮೂಲಕ ಮೃತ ಬಾಲಕಿ ಮನೆಗೆ ತೆರಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರ ವನ್ನು ಒತ್ತಾಯಿಸಿದರು. ತಾಲೂಕು ಮೆಡಿಕಲ್ ಶಾಫ್ ಮಾಲಿಕರು ಹಾಗೂ ನೌಕರರ ಸಂಘದಿಂದ ಮೆರವಣಿಗೆ ನಡೆಸಿ, ಗ್ರೇಡ್-2 ತಹಶೀ ಲ್ದಾರ್ ಕುಮಾರ್‌ಗೆ ಮನವಿ ಸಲ್ಲಿಸಿದರು. ಅಧ್ಯಕ್ಷ ಗೋಪಿನಾಥ್, ಕಾರ್ಯದರ್ಶಿ ಮಧು ಇದ್ದರು.
ಡಾ.ಬಾಬು ಜಗಜೀವನ ರಾಮ್ ವಿಚಾರ ವೇದಿಕೆಯಿಂದ ಸಾರಿಗೆ ಬಸ್ ನಿಲ್ದಾಣದಿಂದ ಆರೋಪಿ ವಿರುದ್ಧ ಕೂಗಿ ಕೂಗುತ್ತಾ ಅನಂತ್ ರಾಮ್ ವೃತ್ತದ ಬಳಿ ಜಮಾಯಿಸಿ ಆರೋ ಪಿಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಅಧ್ಯಕ್ಷ ನಡಕಲಪುರ ಮಂಜುನಾಥ್, ಪ್ರಶಾಂತ್, ಕೃಷ್ಣಮೂರ್ತಿ, ಕೃಷ್ಣ, ಭೂವಯ್ಯ, ಬಸವರಾಜ್, ಮಂಟೇಲಿಂಗಯ್ಯ, ಸುಂದರ್, ನಿಂಗರಾಜು, ಮುತ್ತುರಾಜು, ಪ್ರಮೀಳಾ ಇದ್ದರು.
ದಲಿತ ಮುಖಂಡರಿಂದ ಆಕ್ರೋಶ: ಮಳ್ಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿ ನಡೆಸಿ ದಲಿತ ಮುಖಂಡರು, ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ವನ್ನು ತೀವ್ರವಾಗಿ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿ ಧಿಸುವಂತೆ ಆಗ್ರಹಿಸಿದರು. ಈ ವೇಳೆ ಮುಖಂಡರಾದ ನಟರಾಜ್, ಯತೀಶ್, ಸುರೇಶ್, ಸಿದ್ದರಾಮು, ನಂಜುಂಡ ಸ್ವಾಮಿ, ಪವನ್ ಇದ್ದರು.