Advertisement

ಮಳೆಯಿಂದ ಅಹೋರಾತ್ರಿ ಧರಣಿ ನಿರತರ ಪರದಾಟ

03:54 PM Apr 16, 2021 | Team Udayavani |

ಮಂಡ್ಯ: ನಿವೇಶನಕ್ಕಾಗಿ ಆಗ್ರಹಿಸಿ ಕಳೆದಇಪ್ಪತ್ತೈದು ದಿನಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅಹೋರಾತ್ರಿಧರಣಿ ನಡೆಸುತ್ತಿರುವ ಬೂದನೂರುನಿವೇಶನ ರಹಿತರಿಗೆ ಬುಧವಾರ ಸಂಜೆಬಿದ್ದ ಬೇಸಿಗೆಯ ಅಕಾಲಿಕಮಳೆಯಿಂದಾಗಿ ತೀವ್ರ ಅನಾನುಕೂಲಉಂಟಾಯಿತು.ರಾತ್ರಿಯಿಡಿ ಪಕ್ಕದ ವಯಸ್ಕರ ಶಿಕ್ಷಣಇಲಾಖೆ ಕಟ್ಟಡದ ಪಡಸಾಲೆಯಲ್ಲಿಕಾಲ ಕಳೆದ ಪ್ರತಿಭಟನಾಕಾರರ ಪರಿಸ್ಥಿತಿಹೇಳತೀರದಾಗಿತ್ತು.

Advertisement

ಧರಣಿಗೆನಿರ್ಮಿಸಿದ್ದ ಶಾಮಿಯಾನ ಬಿದ್ದುಮಳೆಯಲ್ಲಿ ತೊಯ್ದುಹೋದ ಕಾರಣಗುರುವಾರ ರಸ್ತೆಯಲ್ಲೇ ಕುಳಿತು,ಅಡುಗೆ ಮಾಡಿ ಬಡಿಸುವ ಮೂಲಕಪ್ರತಿಭಟನೆ ಮುಂದುವರಿಸಿದ್ದಾರೆ.ನಿವೇಶನ ಮಂಜೂರುಮಾಡುವವರೆಗೂ ಧರಣಿ ಕೈಬಿಡಲ್ಲ:ಕಳೆದ ನಾಲ್ಕು ವರ್ಷಗಳಿಂದಹೋರಾಟ ಮಾಡುತ್ತಾ ಬಂದಿರುವನಾವು, ಹಲವಾರು ಬಾರಿ ಧರಣಿನಡೆಸಿದಾಗ ಅ ಧಿಕಾರಿಗಳು ಭರವಸೆನೀಡಿ ಕಳುಹಿಸಿದ್ದಾರೆ. ಈ ಬಾರಿಯೂಅದೇ ರೀತಿ ಮಾಡಿದ್ದಾರೆ.

ಆದರೆ ನಾವುನಿವೇಶನ ಮಂಜೂರುಮಾಡುವವರೆಗೂ ಹೋಗುವುದಿಲ್ಲಎಂದು ಹಠ ಹಿಡಿದು ಕುಳಿತಿದ್ದಾರೆ.ಮಳೆ, ಬಿಸಿಲು ಎನ್ನದೆ ಗ್ರಾಮಸ್ಥರು,ವಿವಿಧ ಸಂಘಟನೆಗಳ ಮುಖಂಡರುಹಾಗೂ ದಾನಿಗಳ ನೆರವು ಪಡೆದುಹೋರಾಟ ಮುಂದುವರಿಸಿದ್ದಾರೆ.

ಕೊರೊನಾ ಎರಡನೇ ಸೋಂಕಿನಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಪ್ರತಿಭಟನೆ, ಧರಣಿಗೆ ಅವಕಾಶ ನೀಡಿಲ್ಲಎಂದು ಪೊಲೀಸ್‌ ಇಲಾಖೆ ಪ್ರತಿಭಟನೆಕೈಬಿಡುವಂತೆ ಮನವಿ ಮಾಡಿದ್ದರೂಪ್ರತಿಭಟನಾಕಾರರು ನಮ್ಮನ್ನು ಬಂಧಿಸಿದರೂ ಸರಿಯೇ ಧರಣಿ ಕೈಬಿಡಲ್ಲಎಂದು ಹಠ ಹಿಡಿದಿದ್ದಾರೆ.ಪ್ರತಿಭಟನೆಯಲ್ಲಿ ಎಂ.ಬಿ.ನಾಗಣ್ಣಗೌಡ,ಸಿ.ಕುಮಾರಿ, ಬೂದನೂರು ಸತೀಶ,ಕಾಮಾಕ್ಷಿ, ಸವಿತ, ಸುಧಾ, ಮಾದೇವಿಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next