Advertisement

ಸೌಹಾರ್ದತಾ ನಡಿಗೆಗೆ ಬ್ರೇಕ್ ಹಾಕಿದ ಪೊಲೀಸರು: ಕಾರ್ಯಕರ್ತರು ವಶಕ್ಕೆ

07:07 PM Sep 19, 2022 | Team Udayavani |

ಕುಳಗೇರಿ ಕ್ರಾಸ್ : (ಬಾಗಲಕೋಟೆ) ಹಿಂದೂ ಜಾಗರಣಾ ವೇದಿಕೆಯವರು ಕೆರೂರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ‘ಕೆರೂರ ಚಲೋ, ಕಾರ್ಯಕ್ರಮ ವಿರೋಧೀಸಿ ಭಾರತೀಯ ಶರಣ ಸೇನಾ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೌಹಾರ್ದತಾ ನಡಿಗೆ ಕೆರೂರ ಕಡೆಗೆ ಪಾದಯಾತ್ರೆಗೆ ಪೊಲೀಸರು ಬ್ರೇಕ್ ಹಾಕಿದರು.

Advertisement

ಹೆದ್ದಾರಿಯ ಕೆಲವು ಕಡೆ ಪೊಲೀಸ್ ಕಾವಲು ಹಾಕಿ ಪಾದಯಾತ್ರೆಗೆ ಆಗಮಿಸುತ್ತಿದ್ದ ಜನರನ್ನ ತಡೆದು ಬಂಧಿಸಿದ್ದರಿಂದ ಪಾದಯಾತ್ರೆಯಲ್ಲಿ 12 ರಿಂದ 15 ಜನ ಮಾತ್ರ ಭಾಗವಹಿಸಿದ್ದರು. ಕಾರ್ಯಕರ್ತರಿಗಿಂತ ಪೊಲೀಸರೇ ಜಾಸ್ತಿ ಇದ್ದರು.

ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ಸೌಹಾರ್ದ ನಡಿಗೆ ಪ್ರಾರಂಭಿಸಿದ ಸಂಘಟನೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಹೆಜ್ಜೆ ಹಾಕಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವಚಿತ್ರ ಹಿಡಿದು ಮೆರವಣಿಗೆ ಪ್ರಾರಂಭಿಸಿ ಪಾದಯಾತ್ರೆಗೆ ಮುಂದಾದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ನಂತರ ಜಿಲ್ಲಾಡಳಿತ ಹಾಗೂ ಪೊಲೀಸ್ ವಿರುದ್ಧ ಘೋಷಣೆ ಕೂಗಲು ಪ್ರಾರಂಭಿಸಿದರು.

ನಂತರ ಸಾಮಾಜೀಕ ಕಾರ್ಯಕರ್ತ ಯಲ್ಲಪ್ಪ ಹೆಗಡೆ ಮಾತನಾಡಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಿ ಕೋಮು ಸೌಹಾರ್ದತೆಯನ್ನು ಹದಗೆಡಿಸುತ್ತಿರುವ ದುಷ್ಕರ್ಮಿಗಳ ಮತ್ತು ಸಮಾಜಘಾತಕ ಶಕ್ತಿಗಳ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನೂ ಹಲವಾರು ಜನರು ಶಾಂತಿಗೆ ಭಂಗ ತರುವ ಕೆಲಸ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದರು.

Advertisement

ಸೌಹಾರ್ದತೆ ಕಾಪಾಡುವ ಕುರಿತು ಜಾಗೃತಿ ಮೂಡಿಸುತ್ತಿರುವ ಪಾದಯಾತ್ರೆಯನ್ನ ನಿಲ್ಲಿಸಿ ನಮ್ಮನ್ನು ಬಂಧನ ಮಾಡಿ ಕೋಮುವಾದಿ ಸಂಘಟನೆಗಳಿಗೆ ಸಹಕಾರ ನೀಡಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿದರು. ನಮ್ಮನ್ನು ಬಂಧನ ಮಾಡುವ ಮುನ್ನ ಬೇರೆ ಜಿಲ್ಲೆಗಳಿಂದ ಆಗಮಿಸಿ ನಮ್ಮ ಜಿಲ್ಲೆಯ ಗ್ರಾಮಗಳಲ್ಲಿ ಶಾಂತಿ ಭಂಗ ಮಾಡುವವರನ್ನು ಬಂಧಿಸಿ ಎಂದು ಆಗ್ರಹಿಸಿದರು.

ಬಸವರಾಜ ದ್ಯಾಮನ್ನವರ, ವಿಠಲ್ ಮಿರ್ಜಿ, ಮಲ್ಲು ಹಾದಿಮನಿ, ಡಿ ಡಿ ನಧಾಪ್, ಶಿವಾನಂದ ಲೆಂಕೆನ್ನವರ, ವಿರೇಶ ಕಾಟಾಪೂರ, ರಾಜು ಮೇಟಿ, ಮುತ್ತಪ್ಪ ಮದರಖಂಡಿ, ಸದಾಶಿವ ತಿಮ್ಮಾಪೂರ, ಮುತ್ತು ಬಿಲ್ಲಾರ ಸೇರಿದಂತೆ ಹಲವು ಸಂಘಟನೆ ಕಾರ್ಯಕರ್ತರು ಮುಖಂಡರು ಇದ್ದರು.

ಪಾದಯಾತ್ರೆ ಪ್ರಾರಂಭವಾಗುವ ಮುನ್ನವೇ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು: ಓರ್ವ ಡಿವೈಎಸ್‌ಪಿ, 4 ಜನ ಪಿಎಸ್‌ಐ, 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಗಲಭೆ ನಡೆಯಬಾರದೆಂಬ ಉದ್ಧೇಶದಿಂದ ಮುಂಜಾಗೃತ ಕ್ರಮವಾಗಿ ಪಾದಯಾತ್ರೆಯಲ್ಲಿ ಭಾಗಿಯಾದವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಬಾದಾಮಿ ಪಿಎಸ್‌ಐ ನೇತ್ರಾವತಿ ಪಾಟೀಲ ಪತ್ರಿಕೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next