ಪ್ರತಿಭಟಿಸುವುದಾಗಿ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಕುರಿತಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಅವರು, ಅಣ್ಣಿಗೇರಿನಗರದಲ್ಲಿ ವಾಸಿಸಲು ಮನೆ ಇಲ್ಲದ ಸಾಕಷ್ಟು ಬಡವರು ನಾನು ಶಾಸಕನಿದ್ದಾಗ ನಿವೇಶನ ನೀಡಲು ಅರ್ಜಿ ಸಲ್ಲಿಸಿದ್ದರು. ಆಗ ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ.198/1+2 ನೇದ್ದರ 18 ಎಕರೆ 26 ಗುಂಟೆ ಜಮೀನನ್ನು ಖರೀದಿಸಿ ನೂತನ ಪದ್ಧತಿಯಲ್ಲಿ ಲೇಜೌಟ್ ನಿರ್ಮಿಸಿ ಕೆಜಿಪಿ ಉತಾರ ಅನುಮೋದನೆ ತೆಗೆದುಕೊಂಡು ಎಲ್ಲ ನಿವೇಶನ ರಹಿತರಿಗೆ ಹಕ್ಕುಪತ್ರ ವಿತರಿಸಿದ ನಂತರ ಉತಾರದಲ್ಲಿ ಫಲಾನುಭವಿಗಳ ಹೆಸರು ಬರುವಂತೆ ನಿರ್ಧರಿಸಿ ನನಗಿದ್ದ ಶಾಸನಬದ್ಧ ಅ ಧಿಕಾರ ಮೇಲೆ 650 ಫಲಾನುಭವಿಗಳನ್ನು ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಫಲಾನುಭವಿಗಳನ್ನು ಅನರ್ಹರೆಂದು ಗುರುತಿಸಲಾಗಿದ್ದು, ಫಲಾನುಭವಿಗಳನ್ನು ರದ್ದುಪಡಿಸಿ ಪುನಃ ಫಲಾನುಭವಿಗಳನ್ನು
ಆಯ್ಕೆ ಮಾಡಲು ಸಭೆ ನಿರ್ಧರಿಸಿದೆ ಎಂದು 650 ಫಲಾನುಭವಿಗಳಿಗೆ ನೋಟಿಸ್ ನೀಡಿ 7 ದಿನಗಳೊಳಗೆ ಸಂಬಂಧಿಸಿದ ಇಲಾಖೆಯಿಂದ ದೃಢೀಕರಣ ಪತ್ರ ಹಾಜರಪಡಿಸಲು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಒಮ್ಮೆ ಆಶ್ರಯ ಸಮಿತಿಯಲ್ಲಿ ಆಯ್ಕೆಯಾದ
ಫಲಾನುಭವಿಗಳನ್ನು ರದ್ದುಪಡಿಸಲು ಬರಲ್ಲ. ಆ ರೀತಿ ಕ್ರಮ ಕೈಗೊಂಡರೆ ಈಗಾಗಲೇ ಹಂಚಿಕೆಯಾದ ಬಡ ಜನತೆಗೆ
ಅನ್ಯಾಯವಾಗುತ್ತದೆ. ಕಾರಣ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ಅಣ್ಣಿಗೇರಿಯಲ್ಲಿ ಬಂಗಾರಪ್ಪ ನಗರ
ನಿರ್ಮಾಣವಾದ ನಂತರ ಅಣ್ಣಿಗೇರಿ ಪುರಸಭೆಗೆ ಆಶ್ರಯ ಜಾಗವೇ ಇರಲಿಲ್ಲ. ಇದಲ್ಲದೇ ಆದಿವಾಸಿ ಜನಾಂಗದವರ ಚಿಕ್ಕಲಗಾರ
ಹಾಗೂ ಗೊಂದಳೆ ಸಮಾಜದ ಬಹುದಿನದ ಸಮಸ್ಯೆ ಬಗೆಹರಿಸಲು ನವಲಗುಂದ ರಸ್ತೆಯ ರೇಲ್ವೆ ಗೇಟ್ ಹತ್ತಿರ ಜನಾಬ ಮಾಬೂಸಾಬ ಮಹ್ಮದಸಾಬ ಗಾಡಗೋಳಿ ಇವರ ಸರ್ವೇ ನಂ.: 1070/4 ಕ್ಷೇತ್ರ 4 ಎಕರೆ ಜಮೀನು ಖರೀದಿಸಲು ಆಶ್ರಯ ಸಮಿತಿಯಲ್ಲಿ ನಿರ್ಧರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
Related Articles
ನಾಗುಬಾಯಿ ವಿನಾಯಕ ಗಳಗಿ ಇವರ ಸರ್ವೇ ನಂ.: 286/1 ಕ್ಷೇತ್ರ 15 ಎಕರೆ 37 ಗುಂಟೆ ಜಮೀನು ಹಾಗೂ ಬಾಯಕ್ಕ ಚಂದ್ರಣ್ಣ
ಹುಬ್ಬಳ್ಳಿ ಅವರ ಕುಟುಂಬಕ್ಕೆ ಸಂಬಂಧಿಸಿದ 10 ಎಕರೆ ಜಮೀನು ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಮನೆ ಇಲ್ಲದ ಎಲ್ಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಬೇಕಿದೆ. ನಾನೇ ಶಾಸಕನಿದ್ದ ಅವಧಿಯಲ್ಲಿ ಹಕ್ಕುಪತ್ರ ನೀಡಲು ನಿರ್ಧರಿಸಿದ್ದೆ.
Advertisement
ಆದರೆ 2018 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಹಕ್ಕುಪತ್ರ ನೀಡಲುಸಾಧ್ಯವಾಗಲಿಲ್ಲ. ಈಗಾಗಲೇ ಆಯ್ಕೆಯಾದ ಫಲಾನುಭವಿಗಳಿಗೆ ಒಂದು ತಿಂಗಳೊಳಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲವಾದಲ್ಲಿ
ಒಂದು ತಿಂಗಳ ನಂತರ ಅಣ್ಣಿಗೇರಿ ಪುರಸಭೆ ಎದುರುಗಡೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.