ಮಂಡ್ಯ: ಉತ್ತರ ಪ್ರದೇಶದಲ್ಲಿ ಮಹಿಳೆಯರು, ದಲಿತರು, ಹಿಂದುಳಿದ ಜನ ಸಮುದಾಯಗಳ ಮಾನ, ಪ್ರಾಣ ಹಾಗೂ ನಾಗರೀಕ ಹಕ್ಕು, ಸ್ವಾತಂತ್ರ್ಯ ಗಳನ್ನು ರಕ್ಷಿಸಲು ವಿಫಲವಾಗಿರುವ ಮತ್ತು ದಮನ ಮಾಡುತ್ತಿರುವಬಿಜೆಪಿಸರ್ಕಾರವನ್ನುವಜಾಗೊಳಿಸ ಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಅಟ್ಟಹಾಸಕ್ಕೆ ಕುಮ್ಮಕ್ಕು: ಸೆ.14ರಂದು ಹತ್ರಾಸ್‌ನಲ್ಲಿ ನಾಲ್ವರು ದುರುಳರು ಮನಿಷಾ ವಾಲ್ಮೀಕಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿಭೀಕರವಾಗಿ ಕೊಲೆ ಮಾಡಿದ್ದಾರೆ. ಶವವನ್ನು ಪೋಷಕರಿಗೂ ನೀಡದೆ ಅನಾಥ ಶವದಂತೆ ಪೊಲೀಸರ ಮೂಲಕ ಸುಟ್ಟು ಹಾಕಿದ್ದಾರೆ. ಪೊಲೀಸರ ಅಟ್ಟಹಾಸಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ರಕ್ಷಣೆಗೆ ಸರ್ಕಾರ ವಿಫಲ: ಯೋಗಿ ಆದಿತ್ಯನಾಥ ಸರ್ಕಾರವು ರಾಜ್ಯದ ಮಹಿಳೆಯರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮಾನ, ಪ್ರಾಣಹಾಗೂ ನಾಗರೀಕ ಹಕ್ಕು, ಸ್ವಾತಂತ್ರ್ಯ ಗಳನ್ನು ರಕ್ಷಿಸಿ ಅವರಿಗೆ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡುವಲ್ಲಿ ವಿಫಲವಾಗಿದೆ. ಇತ್ತೀ ಚಿನ ಸಂಶೋಧನಾ ವರದಿಗಳ ಪ್ರಕಾರ ದೃಢಪಟ್ಟಿ ರುವಂತೆ ದೇಶವ್ಯಾಪಿ ನಡೆಯುತ್ತಿರುವ ಲಕ್ಷ ಲಕ್ಷ ಅತ್ಯಾಚಾರ, ಕಗ್ಗೊಲೆ, ದೌರ್ಜನ್ಯ, ಕೋಮುಗಲಭೆ ಗಳು ಉತ್ತರಪ್ರ ದೇಶದಲ್ಲಿ ಹೆಚ್ಚಾಗಿದೆ.ಅಸಹಾಯಕರಿಗೆ ವಿಶೇಷವಾಗಿ ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರಿಗೆ ರಕ್ಷಣೆ ನೀಡಲು ಸಂಪೂರ್ಣವಾಗಿವಿಫಲರಾಗಿರುವ ಬಿಜೆಪಿ ಸರ್ಕಾರ ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸಲು ಅನರ್ಹವಾಗಿದೆ. ಆದ್ದರಿಂದ ಕೂಡಲೇ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾಗೊಳಿಸ ಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪ್ರೊ.ಹುಲ್ಕೆರೆ ಮಹದೇವು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಕೆಂಪಣ್ಣ ಸಾಗ್ಯ, ದೇವರಾಜು, ರಮಾನಂದ, ಪ್ರಸನ್ನ ತೂಬಿನಕೆರೆ, ರವಿಚಂದ್ರ, ಸ್ವಾಮಿ, ಶಿವಕುಮಾರ್, ಕುಬೇರಪ್ಪ, ವೆಂಕಟೇಶ್, ಕಿರಣ್‌ಕುಮಾರ್ ಸೇರಿದಂತೆ ಅನೇಕರು ಇದ್ದರು.