ವಾಡಿ: ಅಭ್ಯರ್ಥಿಗಳು ನಾಮಪತ್ರಕ್ಕೆ ಸಹಿ ಹಾಕುವ ಸಂದರ್ಭ ದುರ್ಬಳಕೆ ಮಾಡಿಕೊಂಡ ಗ್ರಾಮದ ರಾಜಕೀಯ ಪ್ರಭಾವಿಮುಖಂಡರು, ಅಭ್ಯರ್ಥಿಗಳ ಗಮನ ಬೇರೆಡೆ ಸೆಳೆದು ನಾಮಪತ್ರ ಹಿಂಪಡೆಯುವ ಪತ್ರಕ್ಕೂ ಸಹಿ ಹಾಕಿಸಿಕೊಂಡು ಮೋಸ ಮಾಡಿರುವ ಆರೋಪ ರಾವೂರ ಗ್ರಾಮಸ್ಥರಿಂದ ಕೇಳಿಬಂದಿದೆ.
ರಾವೂರ ಗ್ರಾಪಂ ವ್ಯಾಪ್ತಿಯ ಒಟ್ಟು 32 ಸ್ಥಾನಗಳಿಗೆ 56 ನಾಮಪತ್ರ ಸಲ್ಲಿಕೆಯಾಗಿವೆ. ಗ್ರಾಮದ ಪ್ರಭಾವಿಮುಖಂಡರು, ಎಲ್ಲ ಸ್ಥಾನಗಳನ್ನು ಅವಿರೋಧವಾಗಿ ಆಯ್ಕೆಗೊಳಿಸಲು ಮುಂದಾಗಿರುವುದೇ ಜನಾಕ್ರೋಶಕ್ಕೆ, ಪ್ರತಿಭಟನೆಗೆ ಕಾರಣವಾಗಿದೆ.
ಗುರುವಾರ ವಾರ್ಡ್-7ರ ನೂರಾರು ಜನಮತದಾರರು ಗ್ರಾಪಂ ಮುಂದೆ ದಿಢೀರ್ ಪ್ರತಿಭಟನೆನಡೆಸಿದ ಪ್ರಸಂಗ ನಡೆಯಿತು. ರಾವೂರ ಗ್ರಾಮದಲ್ಲಿ ಜನಾಭಿಪ್ರಾಯ ಪಡೆಯದೇ ಎರಡು ಪಕ್ಷಗಳ ಮುಖಂಡರುತಮಗಿಷ್ಟವಾದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಜನರುಸೂಚಿಸುವ ನಾಯಕನನ್ನು ಚುನಾವಣೆಗೆ ಸ್ಪರ್ಧಿಸದಂತೆಬೆದರಿಕೆ ಹಾಕುತ್ತಿದ್ದಾರೆ. ನಾವು ಸಲ್ಲಿಸಿದ ನಾಮಪತ್ರದಜತೆಗೆ ನಾಮಪತ್ರ ವಾಪಸ್ ಪಡೆಯುವ ಅರ್ಜಿಯನ್ನು ಜೋಡಿಸಿಟ್ಟು ಮೋದಿಂದ ನಮ್ಮ ಸಹಿ ಹಾಕಿಸಿಕೊಂಡಿದ್ದಾರೆ. ಬಹುತೇಕ ವಾರ್ಡ್‌ಗಳಲ್ಲಿ ಇದೇ ತಂತ್ರ ಅನುಸರಿಸಿಪ್ರಜಾತಂತ್ರ ವ್ಯವಸ್ಥೆಗೆ ಮಸಿ ಬಳಿದಿದ್ದಾರೆ ಎಂದು ಸಹಿವಂಚನೆಗೊಳಗಾದ ಅಭ್ಯರ್ಥಿಗಳಾದ ಶ್ರೀದೇವಿ ರಜನಿಕಾಂತಭೋವಿ (ಪರಿಶಿಷ್ಟ ಜಾತಿ ಮೀಸಲು), ರಹೆಮಾನ್‌ಪಟೇಲ (ಸಾಮಾನ್ಯ), ಯುವ ಮುಖಂಡ ಮಹೆಬೂಬಖಾನ್ ಆರೋಪಿಸಿದರು.
ನಾವು ಯಾರದೇ ಒತ್ತಡಕ್ಕೆ ಮಣಿಯುವುದಿಲ್ಲ. ನಾಮಪತ್ರ ಹಿಂಪಡೆಯುವುದಿಲ್ಲ. ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಅಕ್ರಮವಾಗಿಸಹಿ ಹಾಕಿಸಿ, ಅಭ್ಯರ್ಥಿಗಳನ್ನು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಚುನಾವಣೆ ಅಧಿಕಾರಿಗಳನ್ನು ಒತ್ತಾಯಿಸಿದರು. ಒಟ್ಟು 32 ಸದಸ್ಯ ಸ್ಥಾನ ಹೊಂದುವ ಮೂಲಕ
ಚಿತ್ತಾಪುರ ತಾಲೂಕಿನಲ್ಲೇ ಅತಿ ದೊಡ್ಡ ಗ್ರಾಪಂ ಎಂದು ಕರೆಯಿಸಿಕೊಂಡಿರುವ ರಾವೂರ ಗ್ರಾಪಂ ರಾಜಕಾರಣ ಇದೀಗ ಜನಾಕ್ರೋಶಕ್ಕೆ ಗುರಿಯಾಗಿದೆ. ಪಕ್ಷ ರಾಜಕಾರಣದಿಂದ ಮುಕ್ತವಾಗಿ ನಡೆಯಬೇಕಿದ್ದ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ ಹೆಣೆಯುತ್ತಿದ್ದಾರೆ. ಪ್ರತಿಸ್ಪರ್ಧಿಗಳ ಮೇಲೆ ಒತ್ತಡ ಹೇರುವ ಮೂಲಕ ಎಲ್ಲ ಸ್ಥಾನಗಳನ್ನು ಅವಿರೋಧವಾಗಿ ಗೆಲ್ಲಲು ವಿವಿಧ ರೀತಿಯ ಬಲ ಪ್ರಯೋಗ ಮಾಡುತ್ತಿದ್ದು, ಮತದಾರರಿಂದ ಪ್ರತಿರೋಧ ಎದುರಿಸುತ್ತಿದ್ದಾರೆ.
ಚುನಾವಣೆಗೆ ಸ್ಪರ್ಧೆ ಬಯಸಿಸಲ್ಲಿಸಲಾದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಿಕ್ರಮಬದ್ಧವಾಗಿ ನಾಮಫಲಕಕ್ಕೆ ಲಗತ್ತಿಸಿದ್ದೇವೆ. ನಾಮಪತ್ರಹಿಂಪಡೆಯಲು ನಾವು ಯಾರಿಗೂಅರ್ಜಿ ವಿತರಿಸಿಲ್ಲ. ಹೊರಗಿನ ಖಾಸಗಿ ಅಂಗಡಿಗಳಲ್ಲೂಈ ಅರ್ಜಿಗಳು ಲಭ್ಯವಿವೆ. ಅಭ್ಯರ್ಥಿಗಳು ಮುಖಾಮುಖೀಹಾಜರಾಗಿ ನಾಮಪತ್ರ ಹಿಂದಕ್ಕೆ ಪಡೆಯಬೇಕು. ಅಭ್ಯರ್ಥಿಕಚೇರಿಗೆ ಹಾಜರಾಗದ ಸ್ಥಿತಿಯಲ್ಲಿದ್ದರೆ, ಅವರ ಸೂಚಕರುಹಾಜರಾಗಿ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಆಗಲೂ ನಾವು ಅಭ್ಯರ್ಥಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಅಭಿಪ್ರಾಯ ಪಡೆಯುತ್ತೇವೆ.
– ರಾಜಶೇಖರ ಮಠ,ಚುನಾವಣೆ ಅಧಿಕಾರಿ, ಗ್ರಾ.ಪಂ, ರಾವೂರ
ರಾವೂರಿನಲ್ಲಿ ರಾಜಕೀಯ ಮುಖಂಡರಿಂದ ಪ್ರಜಾಪ್ರಭುತ್ವದಕಗ್ಗೊಲೆಯಾಗಿದೆ. ಚುನಾವಣೆ ಎದುರಿಸಲು ಉತ್ಸಾಹಿ ಯುವಕರು ಸಿದ್ಧರಿದ್ದರೂ ಸ್ಪರ್ಧಿಸದಂತೆ ಬೆದರಿಕೆ ಹಾಕುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಮುಂದಾದವರ ಅರ್ಜಿಗಳನ್ನು ಕಸಿದುಕೊಂಡು ಹರಿದು ಹಾಕುವ ಮಟ್ಟಕ್ಕೆ ಗೂಂಡಾ ರಾಜಕಾರಣ ಹುಟ್ಟಿಕೊಂಡಿದೆ. ಹೀಗಾಗಿ ಅನೇಕ ಯುವಕರುರಾಜಕೀಯ ಅಧಿಕಾರದಿಂದ ವಂಚಿತರಾಗಿದ್ದಾರೆ. –
ರಾಘವೇಂದ್ರ ಹೂಗಾರ, ಯುವ ಮುಖಂಡ