Advertisement

ಕಳ್ಳತನ ಪ್ರಕರಣ ಖಂಡಿಸಿ ಪ್ರತಿಭಟನೆ

12:38 PM Jan 12, 2018 | |

ಆಲಮೇಲ: ಪಟ್ಟಣದಲ್ಲಿ ಸರಣಿ ಕಳ್ಳತನ ವಾಗುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಪೊಲೀಸರನ್ನು
ವರ್ಗಾಯಿಸಬೇಕು ಎಂದು ಆಗ್ರಹಿಸಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ ಮಾಡಿ ಪೊಲೀಸ್‌ ಠಾಣೆ
ಎದುರು ಪ್ರತಿಭಟನೆ ನಡೆಸಿದರು.

Advertisement

ಬಸವರಾಜ ಧನಶ್ರೀ, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ತೋಡಕರ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ದೇವಪ್ಪ
ಗುಣಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಿಎಸ್‌ಐ ಅನೀಲಕುಮಾರ ಎಚ್‌ .ಡಿ. ದೂರು ಸಲ್ಲಿಸಿ ಸ್ವಲ್ಪ ಕಾಲಾವಕಾಶ ನೀಡಿ. ಕಳ್ಳರನ್ನು ಬಂಧಿಸುತ್ತವೆ ಎಂದು ಮನವಿ ಮಾಡಿದರು.

ಆದರೆ ಮೇಲಾಧಿಕಾರಿಗಳು ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಂದಗಿ ಸಿಪಿಐ ಮಹಾಂತೇಶ ದ್ಯಾಮಣ್ಣನವರ
ಮಾತನಾಡಿ, ವಾರದೊಳಗಾಗಿ ಕಳ್ಳರನ್ನು ಬಂಧಿಸಲಾಗುವುದು. 

ಇನ್ನು ಮುಂದೆ ಈ ರೀತಿ ಯಾವುದೇ ಕಳ್ಳತನವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಗಸ್ತು
ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ವ್ಯಾಪಾರ ವಹಿವಾಟು ಮುಂದು
ವರಿಸಲಾಯಿತು. ಉಸ್ಮಾನಸಾಬ್‌ ಮೇಲಿಮನಿ, ರವಿ ಬಡದಾಳ, ಸುನೀಲ ಗುಂದಗಿ, ಬಸವರಾಜ ರಾಯಗೊಂಡ, ಬಸವರಾಜ ತೆಲ್ಲೂರ, ಗುಂಡು ಜೋಗೂರ, ಮಲ್ಲಿಕಾರ್ಜುನ ಅಚ್ಚಲೇರಿ, ಭರತಕುಮಾರ ಮೇಟಿ, ಸಂಗಪ್ಪ ಸುಂಠಿ,
ದೇವಾನಂದ ಖಂದಾರೆ, ಮಲ್ಲು ಮಹಿಂದ್ರಕರ ಸೇರಿದಂತೆ ಪಟ್ಟಣದ ಎಲ್ಲ ಅಂಗಡಿ ವ್ಯಾಪರಸ್ಥರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next