Advertisement

ಕೇಂದ್ರದ ಕಾಯ್ದೆ ವಿರೋಧಿಸಿ ಪ್ರತಿಭಟನೆ

12:47 PM Dec 14, 2019 | Suhan S |

ಮೂಡಲಗಿ: ಸಹಕಾರಿ ಸಂಘಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಕಾಯ್ದೆ ವಿರೋಧಿಸಿ ಮೂಡಲಗಿ ತಾಲೂಕು ಸಹಕಾರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಸ್ಟೇಟ್‌ ಕೋ ಆಪರೇಟಿವ್‌ ಸೊಸೈಟಿ ಅಸೋಸಿಯೇಶನ್‌ ಆಶ್ರಯದಲ್ಲಿ ಶುಕ್ರವಾರ ಪಟ್ಟಣದಲ್ಲಿ ಬೃಹತ್‌ ರ್ಯಾಲಿಯೊಂದಿಗೆ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನಾ ರ್ಯಾಲಿ ಕುರುಹಿನಶೆಟ್ಟಿ ಸೊಸೈಟಿ ಆವರಣದಲ್ಲಿ ಸಹಕಾರಿ ಸಂಘದ ಪೀತಾಮಹ ಸಿದ್ದನಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಹಕಾರಿ ಸಂಘಗಳಿಗೆ ಮಾರಕವಾದ ತೆರಿಗೆ ನೀತಿ ಖಂಡಿಸಿ ಕೇಂದದ್ರ ವಿರುದ್ಧ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ನಡೆದ ಸಭೆಯಲ್ಲಿ ರಾಜ್ಯ ಸಹಕಾರಿ ಸೊಸೈಟಿ ಅಸೋಸಿಯೇಶನ್‌ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಮಾತನಾಡಿ, ಸಹಕಾರಿ ಕ್ಷೇತ್ರ ಈ ದೇಶದ ಕೃಷಿಕರ ಮಧ್ಯಮ ವರ್ಗ, ಕಡುಬಡವರಿಗೆ ಸೇವೆ ನೀಡುವ ಕ್ಷೇತ್ರವಾಗಿದೆ. ಈ ಸಂಸ್ಥೆಯು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಈ ದೇಶದ ಆರ್ಥಿಕ ವ್ಯವಸ್ಥೆಗೆ ಅತ್ಯಮೂಲ್ಯವಾದ ಕೊಡುಗೆ ನೀಡುತ್ತಾ ಬಂದಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಸಹಕಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್‌ -ಜಿಎಸ್‌ಟಿ ವಿಧಿಸಿರುವುದು ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ತೊಡಕನ್ನುಂಟು ಮಾಡಿದೆ. ಶೀಘ್ರವೇ ಕೇಂದ್ರ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಚೈತನ್ಯ ಸೊಸೈಟಿ ಪ್ರಧಾನ ಕಾರ್ಯದರ್ಶಿ ಜಿ.ಎಸ್‌. ಬಿಜಗುಪ್ಪಿ ಮಾತನಾಡಿದರು. ಕಲ್ಲೋಳಿ ಮಹಾಲಕ್ಷ್ಮೀ ಸೊಸೈಟಿ ಅಧ್ಯಕ್ಷ ಈರಣ್ಣಾ ಕಡಾಡಿ, ಮೂಡಲಗಿ ಶಿವಬೋಧರಂಗ ಸೊಸೈಟಿ ಉಪಾಧ್ಯಕ್ಷ ಪುಲಕೇಶ ಸೋನವಾಲ್ಕರ, ಚೈತನ್ಯ ಸೊಸೈಟಿ ಅಧ್ಯಕ್ಷ ತಮ್ಮಣ್ಣ ಕೆಂಚರಡ್ಡಿ, ಮಹಾಲಕ್ಷ್ಮೀ ಸೊಸೈಟಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ, ಕುಮಾರೇಶ್ವರ ಸೊಸೈಟಿ ಭೀಮಪ್ಪ ಶಿವಾಪೂರ, ನಾಗನೂರ ಸೊಸೈಟಿ ಅಧ್ಯಕ್ಷ ಬಸವರಾಜ ತಡಸನವರ ಮಾತನಾಡಿದರು. ಮೂಡಲಗಿ, ಗುರ್ಲಾಪುರ, ಹಳ್ಳೂರ, ಶಿವಾಪುರ, ಖಾನಟ್ಟಿ, ಮುನ್ಯಾಳ, ಕಮಲದಿನ್ನಿ, ಧರ್ಮಟ್ಟಿ, ಪಟಗುಂದಿ, ಮುಸಗುಪ್ಪಿ, ವಿವಿಧ ಗ್ರಾಮಗಳಿಂದ 150ಕ್ಕೂ ಹೆಚ್ಚು ಸಂಘಗಳ ಪದಾಧಿ ಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next