Advertisement
ತಾಲೂಕು ಕಚೇರಿಯಲ್ಲಿ ಹಣ ಇಲ್ಲದೇ ಸಾರ್ವಜನಿಕರ ಯಾವುದೇ ಕೆಲಸಗಳಾಗುತ್ತಿಲ್ಲ ತಮ್ಮ ಕೆಲಸ ಕಾರ್ಯ ಬಿಟ್ಟು ಕಚೇರಿ ಅಲೆಯುವಂತಾಗಿದ್ದು,ತಾಲೂಕಿನ ಕೆಲವು ಕಚೇರಿಗಳಲ್ಲಿ ಅಸಮರ್ಥಅಧಿಕಾರಿಗಳಿದ್ದು ಜೆಡಿಎಸ್ ಅಧ್ಯಕ್ಷ ಮಂಜೇಗೌಡರ ಅಣತಿಯಂತೆ ಎಲ್ಲ ಕೆಲಸ ಕಾರ್ಯ ನಡೆಯುತ್ತಿವೆ.
Related Articles
Advertisement
ದುಡ್ಡಿಗಾಗಿ ರೈತರನ್ನು ಕಾಡಬೇಡಿ: ಆಲೂರಿನ ರಾಧಮ್ಮ ಜನಸ್ಪಂಧನ ಸಂಸ್ಥೆ ಮುಖ್ಯಸ್ಥ ಹೇಮಂತ್ ಕುಮಾರ್ ಮಾತನಾಡಿ, ಕೆಲವು ಕಚೇರಿಗಳಲ್ಲಿಸಣ್ಣಪುಟ್ಟ ಕೆಲಸಕ್ಕೂ ರೈತರನ್ನು ಕಚೇರಿಗಳಿಗೆ ಈಗ ಬನ್ನಿ,ನಾಳೆ ಬನ್ನಿ, ಮೇಲಾಧಿಕಾರಿಗಳಿಲ್ಲ, ಮುಂದಿನ ವಾರಬನ್ನಿ ಎಂದು ಅಲೆಸುತ್ತಿದ್ದಾರೆ.
ರೈತರು ಕೆಲಸ ಕಾರ್ಯಬಿಟ್ಟು ಚಳಿ-ಗಾಳಿ-ಮಳೆ ಎನ್ನದೇ ಕಚೇರಿಗೆ ಬಂದು ಬರಿಗೈಯಲ್ಲಿ ವಾಪಸ್ ಆಗುತ್ತಿದ್ದಾರೆ. ಈ ಎಲ್ಲಅಂಶಗಳು ನನ್ನ ಗಮನಕ್ಕೆ ಬಂದಿದ್ದು ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಕೆ.ಹೊಸಕೋಟೆ ಹಾಗೂ ಕುಂದೂರು ಹೋಬಳಿಗಳಿಂದ ಸುಮಾರು ನಲವತ್ತು ಐವತ್ತು ಕಿ. ಮೀ.ನಿಂದ ತಮ್ಮ ಕೆಲಸ ಕಾರ್ಯಗಳಿಗಾಗಿ ತಮ್ಮ ಕೆಲಸ ಬಿಟ್ಟು ಕಚೇರಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳ ಭಂಡಾಟ, ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ರೈತರು ನಮ್ಮ ಕಚೇರಿಗೆ ಬಂದು ದೂರು ನೀಡಿದ್ದಾರೆ. ಅಧಿಕಾರಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು ಕೆಲಸ ಮಾಡಬೇಕು. ಇದೇ ರೀತಿ ರೈತರಿಗೆ ಕಿರುಕುಳ ನೀಡಿದರೆ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರು ಬದುಕೋದೇಗೆ?: ರೈತ ಸಂಘದ ಮುಖಂಡ ಮೋಹನ್ ಮಾತನಾಡಿ ತಾಲೂಕಿನಲ್ಲಿ ರೈತರು ಕಾಡಾನೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಅದರಲ್ಲಿ ಅಧಿಕಾರಿಗಳ ಕಾಟ ಬೇರೆ. ಇದರಿಂದ ರೈತರು ಹೇಗೆ ಬದುಕಬೇಕು? ತಾಲೂಕಿನಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಕೂಲಿ ಕೆಲಸ ಬಿಟ್ಟು ದುಡಿದ ಅರ್ಧಹಣವನ್ನು ಅಧಿಕಾರಿಗಳಿಗೆ ನೀಡಬೇಕು. ಅದರೂಕೆಲಸ ಮಾಡಿಕೊಡುತ್ತಿಲ್ಲ. ಇದೇ ರೀತಿ ಮುಂದುವರಿದರೇ ಜನ ಧಂಗೆ ಏಳುತ್ತಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ವರ್ಗಾವಣೆ ಮಾಡಿ: ತಾಲೂಕು ರೈತ ಸಂಘದ ಉಪಾಧ್ಯಕ್ಷ ದಾಸೇಗೌಡ ಮಾತನಾಡಿ,ತಾಲೂಕು ಕಛೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದೆ.ಅದರಲ್ಲೂ ಸರ್ವೆ ಇಲಾಖೆಯಲ್ಲಿ ಎರಡ್ಮೂರು ವರ್ಷಗಳಿಂದ ಅರ್ಜಿ ಕೊಟ್ಟು ಕಚೇರಿಗೆಅಲೆಯುತ್ತಿದ್ದಾರೆ. ಅದರೂ ಕೆಲಸ ಮಾಡುತ್ತಿಲ್ಲ.ಸರ್ವೆ ಇಲಾಖೆ ಸೇರಿದಂತೆ ಹಲವು ವರ್ಷಗಳಿಂದಝಂಡವುರಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಹಾಗೂ ಸ್ಥಳೀಯ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ತಿಮ್ಮೇಗೌಡ,ರೈತ ಮುಖಂಡ ಹೈದೂರು ಜಯಣ್ಣ,ಮೋಹನ್, ರಾಧಮ್ಮ ಜನಸ್ಪಂಧನ ಸಂಸ್ಥೆ ಮುಖ್ಯಸ್ಥಹೇಮಂತ್ ಕುಮಾರ್, ಚಿಗಳೂರು ದಾಸೇಗೌಡ, ಹನುಮಂತೇಗೌಡ ಹಾಗೂ ಇತರರು ಉಪಸ್ಥಿತರಿದ್ದರು.