Advertisement

ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ

05:36 AM Jun 24, 2020 | Lakshmi GovindaRaj |

ಭಾರತೀನಗರ: ಇಲ್ಲಿಗೆ ಸಮೀಪದ ಮಣಿಗೆರೆ ಗ್ರಾಮದ ಬಳಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಸಾಗುವಳಿದಾರರನ್ನು ತೆರವುಗೊಳಿಸಿದ್ದ ಕ್ರಮ ಖಂಡಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರೈತ ಸಂಘ,  ಜನವಾದಿ ಮಹಿಳಾ ಸಂಘಟನೆಯಿಂದ ನಡೆದ ಪ್ರತಿಭಟನೆಯಲ್ಲಿ ತಹಶೀಲ್ದಾರ್‌ ವಿಜಯಕುಮಾರ್‌ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಭಾರತಿ ಕಾಲೇಜು ಗೇಟ್‌ನಿಂದ ತೆರಳಿದ ಪ್ರತಿಭಟನಾ ನಿರತರು ವಿಶ್ವೇಶ್ವರಯ್ಯ ವೃತ್ತದ ಬಳಿ  ಮಾನವ ಸರಪಳಿ ನಿರ್ಮಿಸಿ, ರೈತರಿಗೆ ಅನ್ಯಾಯ ಮಾಡುತ್ತಿರುವ ತಾಲೂಕು ಆಡಳಿತದ ವಿರುದ್ಧ ಹರಿಹಾಯ್ದರು. ನ್ಯಾಯಾಲಯದಲ್ಲಿ ಸರ್ವೆ ನಂ.1ರಲ್ಲಿ 4.02 ಜಮೀನಿನ ಬಗ್ಗೆ ರೈತರು ಧಾವೆ ಹೂಡಿದ್ದು, ಮೈಸೂರು ಮಹಾರಾಜರು ರೈತರಿಗೆ  ದಾನ ನೀಡಿದ್ದ ಜಮೀನಾಗಿದೆ.

ಅದನ್ನು ಸರ್ಕಾರ ವಶಪಡಿಸಿ ಕೊಳ್ಳುವ ಮೂಲಕ ರೈತರ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ. ಸುಮಾರು 20ರಿಂದ 25 ರೈತರು ಬೇಸಾಯ ಮಾಡುತ್ತಿದ್ದರು. ಸದರಿ ಜಮೀನು ಸರ್ಕಾರ ಮಂಜೂರಾತಿ  ಮಾಡಿಕೊಂಡು ರೈತರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುತ್ತಿರುವುದು ಕಾನೂನು ಬಾಹಿರ ಎಂದರು. ಬಳಿಕ ತಹಶೀಲ್ದಾರ್‌ ವಿಜಯಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು,  ಡೀಸಿಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ನೆಲಮಾಕನಹಳ್ಳಿ ಕೃಷ್ಣೇಗೌಡ, ಟಿ.ಯಶವಂತ್‌, ಕರಡಕೆರೆ ಯೋಗೇಶ್‌, ಕೆ.ಶೆಟ್ಟಹಳ್ಳಿ  ರವಿಕುಮಾರ್‌, ಡಿ.ಎ.ಕೆರೆ ಶೋಭಾ, ಪುಟ್ಟಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next