Advertisement

ತಾಲೂಕು ಆಡಳಿತದ ವಿರುದ್ಧ ಧರಣಿ

04:49 PM Jun 29, 2022 | Team Udayavani |

ಚನ್ನರಾಯಪಟ್ಟಣ: ಸರ್ಕಾರ ನಿಗದಿ ಮಾಡಿರುವ ದಿನಾಂಕದಂದು ತಾಲೂಕು ಆಡಳಿತದಿಂದ ಕೆಂಪೇಗೌಡ ಜಯಂತಿ ಮಾಡದೆ ಇರುವುದನ್ನು ಖಂಡಿಸಿ ಮಿನಿ ವಿಧಾನಸೌಧದ ಮುಂಭಾಗ ಒಕ್ಕಲಿಗ ಹಿತರಕ್ಷಣಾ ವೇದಿಕೆ ಹಾಗೂ ರೈತ ಸಂಘ ದಿಂದ ಧರಣಿ ನಡೆಸಿದರು.

Advertisement

ಒಕ್ಕಲಿಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್‌ ಧರಣಿ ಉದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷವೂ ಜೂ.27ರಂ ದು ಕೆಂಪೇಗೌಡ ಜಯಂತಿ ಮಾಡಲಾಗುತ್ತಿದೆ. ಆದರೆ, ಈ ವರ್ಷ ತಾಲೂಕು ಆಡಳಿತ ನಿಗದಿತ ದಿನಾಂಕದಂದು ಆಚರಣೆ ಮಾಡದೆ ಕೆಂಪೇಗೌಡರಿಗೆ ಅಪಮಾನ ಮಾಡುತ್ತಿದೆ ಎಂದು ತಹಶೀಲ್ದಾರ್‌ ಹಾಗೂ ಶಾಸಕರಿಗೆ ಧಿಕ್ಕಾರ ಕೂಗಿದರು.

ಒಕ್ಕಲಿಗರ ಹಿತ ಕಡೆಗಣನೆ ಆರೋಪ: ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆಯನ್ನು ನಿಗದಿತ ದಿನಾಂಕದಂದು ಮಾಡದೆ ತಹಶೀಲ್ದಾರ್‌ ಗೋವಿಂದರಾಜು ಒಂದು ದಿವಸ ಮುಂಚೆ ಮಾಡಿದ್ದರು. ಇದರಿಂದ ಕೆಂಪೇಗೌಡ ಜಯಂತಿ ಆಚರಣೆಯ ಲ್ಲಿಯೂ ಗೊಂದಲ ಸೃಷ್ಟಿಸಿದ್ದಾರೆ. ತಾಲೂಕಿನಲ್ಲಿ ಒಕ್ಕಲಿಗರ ಹಿತ ಕಾಯುವಲ್ಲಿ ತಾಲೂಕು ಆಡಳಿತ ವಿಫ‌ಲವಾಗಿದೆ. ಜಿಲ್ಲಾಡಳಿತ ಇಂತಹ ಅಧಿಕಾರಿಗಳು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಬಹುಸಂಖ್ಯಾತ ಒಕ್ಕಲಿಗರಿಗೆ ಅನ್ಯಾಯವಾಗುತ್ತಿರುವುದು ನೋಡಿದರೆ ಸಣ್ಣಪುಟ್ಟ ಸಮುದಾಯ ದವರ ಕಥೆ ಏನು? ಇದನ್ನು ನಾವು ಸಹಿಸುವುದಿಲ್ಲ. ಇದರ ವಿರುದ್ಧ ದಂಗೆ ಏಳುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.

ಮಿನಿವಿಧಾನಸೌಧ ಬಂದ್‌ ಮಾಡುವ ಎಚ್ಚರಿಕೆ: ರೈತ ಸಂಘದ ತಾಲೂಕು ಅಧ್ಯಕ್ಷ ರವಿಗೌಡಯ್ಯ ಮಾತನಾಡಿ, ತಾಲೂಕು ಆಡಳಿತ ಜೂ.27 ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡ ದಿದ್ದರೆ, ನಾವೇ ವಿಧಾನಸೌಧದ ಬಾಗಿಲಿ ನಲ್ಲಿ ಜಯಂತಿ ಆಚರಣೆ ಮಾಡಬೇಕಾಗುತ್ತದೆ. ಇನ್ನು ಮಿನಿವಿಧಾನಸೌಧದ ಬಾಗಿಲು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ಶಾಸಕ ಬಾಲಕೃಷ್ಣ ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮೊದಲು ಆದ್ಯತೆ ನೀಡಬೇಕು. ಅದು ಬಿಟ್ಟು ಬೆಂಗಳೂರಿನ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದ್ದಾರೆ. ಮತದಾರರಿಗೆ ಶಾಸಕರು ಅನ್ಯಾಯ ಮಾಡುತ್ತಿದ್ದು ತಾಲೂಕಿಗೆ ಇಂತಹ ಶಾಸಕರ ಅಗತ್ಯವಿಲ್ಲ ಎಂದು ಧಿಕ್ಕಾರ ಕೂಗಿದರು.

ದಿನಾಂಕ ಬದಲಾವಣೆ ನಿರ್ಧಾರ ನೀಡಿದ್ಯಾರು?: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ.ಎಂ.ರಾಮಚಂದ್ರ ಧರಣಿ ನಡೆಯುವ ಸ್ಥಳಕ್ಕೆ ಆಗಮಿಸಿ ತಹಶೀಲ್ದಾರ್‌ ಗೋವಿಂದರಾಜು ಅವರ ನ್ನು ತರಾಟೆಗೆ ತೆಗೆದುಕೊಂಡರು. ಶಾಸಕ ರ ಅಣತಿಯಿಂದ ಕೆಂಪೇಗೌಡ ಜಯಂತಿ ಮಾಡಲು ನಿಮಗೆ ಸರ್ಕಾರ ಆದೇಶ ನೀಡಿಲ್ಲ. ಏಕಾಏಕಿ ದಿನಾಂಕ ಬದಲಾ ಞವಣೆ ಮಾಡಿರುವುದು ತರವಲ್ಲ. ರಾಜ್ಯವ್ಯಾಪ್ತಿ ಕೆಂಪೇಗೌಡ ಜಯಂತಿ ಆಚರಣೆ ಮಾಡುತ್ತಿದ್ದಾರೆ. ಇಲ್ಲಿಯೂ ಅಂದೇ ಮಾಡಬೇಕು ಎಂದು ಪಟ್ಟು ಹಿಡಿದ ಮೇಲೆ ಜಯಂತಿ ಆಚರಣೆ ಮಾಡಲಾಯಿತು.

ಒಕ್ಕಲಿಗ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ತೇಜುಗೌಡ, ಶ್ರೀನಿವಾಸ ಮೂರ್ತಿ, ಕೆಂಪೇಗೌಡ ವೇದಿಕೆ ರಾಜ್ಯಾ ಧ್ಯಕ್ಷ ಮಾರೇನಹಳ್ಳಿ ರವಿ, ಎಂ.ಶಿವರ ಗ್ರಾಪಂ ಮಾಜಿ ಅಧ್ಯಕ್ಷ ಎಸ್‌.ಎಂ. ಪುನೀತ್‌, ಜಿಪಂ ಮಾಜಿ ಸದಸ್ಯ ಎನ್‌ .ಡಿ.ಕಿಶೋರ್‌, ಮುಖಂಡರಾದ ರವಿ, ಮಹೇಶ್‌, ಮಂಜುನಾಥ್‌ ಮೊದಲಾ ದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next