Advertisement

ಸರ್ಕಾರ-ಸಚಿವ ಸುರೇಶ್‌ ಕುಮಾರ್‌ ದ್ವಂದ್ವ ಹೇಳಿಕೆಗೆ ಆಕ್ರೋಶ

07:21 PM Dec 03, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರ ದ್ವಂದ್ವ ಹೇಳಿಕೆ, ಮಲತಾಯಿ ಧೋರಣೆ ವಿರೋಧಿಸಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಕಪ್ಪುಪಟ್ಟಿ ಮತ್ತು ಶ್ವೇತ ಟೋಪಿಗಳನ್ನು ಧರಿಸಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಖಾಸಗಿ ಶಾಲಾಕಾಲೇಜುಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಧೋರಣೆ ಮತ್ತು ನೀತಿ ವಿರುದ್ಧ ಘೋಷಣೆಕೂಗಿದರು.

ಸಂಕಷ್ಟ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ಸಲುವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿದರಿಂದ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಸರ್ಕಾರ ಮತ್ತು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರ ಗೊಂದಲಮಯ ಹೇಳಿಕೆಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು  ಸಾಧ್ಯವಾಗದೆ ಶಿಕ್ಷಕರು ಮತ್ತು ಸಿಬ್ಬಂದಿ ವೇತನವಿಲ್ಲದೇ ಪರ ದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡೀಸಿಗೆ ಮನವಿ: ಜಿಲ್ಲಾ ಖಾಸಗಿ ಶಾಲಾಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿಎನ್‌.ಡಿ ಪ್ರಸನ್ನಕುಮಾರ್‌, ಚಿಕ್ಕಬಳ್ಳಾಪುರಬಿಜಿಎಸ್‌ ಶಾಲೆಯ ಪ್ರಾಂಶುಪಾಲ ಮೋಹನ್‌ಕುಮಾರ್‌, ಶಿಡ್ಲಘಟ್ಟ ಬಿಜಿಎಸ್‌ ಪ್ರಾಂಶುಪಾಲಮಹದೇವ್‌, ಜಿಲ್ಲಾ ಸಂಚಾಲಕ ಮುಶ್ತಾಕ್‌, ಜಾರ್ಜ್‌, ಖಜಾಂಚಿ, ವೈ.ವಿ.ಆನಂದ್‌, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಡಾಲ್ಫಿನ್‌ ನಾಗರಾಜ್‌, ಕಾರ್ಯದರ್ಶಿ ಮೊಹಮದ್‌ ತಮೀಮ್‌ ಅನ್ಸಾರಿ, ಚಿಂತಾಮಣಿ ತಾ.ಅಧ್ಯಕ್ಷ ವೇಮನಾರಾಯಣ್‌, ಕಾರ್ಯದರ್ಶಿ ಮಾಲತಿ, ಗೌರಿಬಿದನೂರು ತಾಲೂಕು ಅಧ್ಯಕ್ಷ ವರಹಾಮೂರ್ತಿ, ಕಾರ್ಯ ದರ್ಶಿ ಚಂದ್ರಮೌಳಿ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಶಿವಣ್ಣ ಕಾರ್ಯದರ್ಶಿ ಪೃಥ್ವಿ, ಬಾಗೇಪಲ್ಲಿ ತಾಲೂಕಿನ ಮೊಹಮದ್‌ ನೂರುಲ್ಲಾ, ಖಜಾಂಚಿ, ಹರೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next