Advertisement

ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿ ಪ್ರತಿಭಟನೆ

04:29 PM Jun 17, 2020 | Suhan S |

ಬೆಳಗಾವಿ: ರಾಜ್ಯ ಸರ್ಕಾರದ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ 1961ರ 79 ಎ ಹಾಗೂ ಬಿ ಪರಿಷ್ಕರಣೆ ಖಂಡಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ರೈತ ವಿರೋಧ ಪರಿಷ್ಕೃತ ಕಾಯ್ದೆಗಳಾದ ಭೂ ಸುಧಾರಣಾ ಕಾಯ್ದೆ 1961ರ 79 ಎ ಹಾಗೂ ಬಿ, ಎಪಿಎಂಸಿ ಕಾಯ್ದೆ ಜಾರಿಗೆ ತಂದಿರುವುದು ರೈತರ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ. ಹಿಂಬಾಲಿಗಿನಿಂದ ಈ ಕಾಯ್ದೆಗಳನ್ನು ಪರಿಷ್ಕರಿಸಿ ಭ್ರಷ್ಟ ಉದ್ಯಮ ಮತ್ತು ಭೂ ಮಾಫಿಯಾಗಳಿಗೆ ಅನುಕೂಲ ಮಾಡಿಕೊಡುತ್ತಿರುವ ರಾಜ್ಯ ಸರ್ಕಾರದ ರೈತ ವಿರೋಧಿ  ನಿಲುವು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಕೋವಿಡ್ ಸೋಂಕು ಎಲ್ಲೆಡೆ ವ್ಯಾಪಿಸುತ್ತಿದ್ದು, ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣವಾಗಿದೆ. ಹಳ್ಳಿಗಳಲ್ಲಿಯೂ ಸೋಂಕು ಹರಡುತ್ತಿರುವುದರಿಂದ ಎಲ್ಲ ವೈದ್ಯೋಪಚಾರ, ಖರ್ಚು ವೆಚ್ಚವನ್ನು ಗ್ರಾಮೀಣ ಭಾಗಕ್ಕೂ ಸರ್ಕಾರವೇ ನೋಡಿಕೊಳ್ಳಬೇಕು. 2019ರ ಅತಿವೃಷ್ಟಿಯಲ್ಲಿ ಮನೆ ಹಾನಿ, ಬೆಳೆ ಹಾನಿ ಹಾಗೂ ಜಾನುವಾರು ಹಾನಿ ಪರಿಹಾರ ಕೂಡಲೇ ನೀಡಬೇಕು. ಬೀಜ ಸುಧಾರಣಾ ಕಾಯ್ದೆ ಮತ್ತು ವಿದ್ಯುತ್‌ ಖಾಸಗೀಕರಣ ಮಾಡುವುದರೊಂದಿಗೆ ವಸಾಹತುಶಾಹಿಗಳಿಂದ ರೈತರನ್ನು ನಿಯಂತ್ರಿಸುವ ವ್ಯವಸ್ಥೆ ಖಂಡನೀಯ ಎಂದು ಮನವಿ ಸಲ್ಲಿಸಿದರು.

ರೈತ ಮುಖಂಡರಾದ ಚೂನಪ್ಪ ಪೂಜೇರಿ, ಜಯಶ್ರೀ ಗುರೆಣ್ಣವರ, ರಾಘವೇಂದ್ರ ನಾಯ್ಕ, ಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next