Advertisement

ಅತ್ಯಾಚಾರ ಖಂಡಿಸಿ ಬನ್ನೂರಿನಲ್ಲಿ ಪ್ರತಿಭಟನೆ

12:37 PM Apr 21, 2018 | |

ಬನ್ನೂರು: ಕಾಶ್ಮೀರದಲ್ಲಿ ಬಾಲಕಿ ಮೇಲಿನ ಅತ್ಯಾಚಾರವೆಸಗಿ ಕೊಲೆಗೈದಿರುವವರಿಗೆ ಕೇಂದ್ರ ಸರ್ಕಾರ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬನ್ನೂರಿನಲ್ಲಿ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳು ಕಾವೇರಿ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಪದ್ಮನಾಭ್‌, ಅಪ್ರಾಪೆ¤ ಮೇಲೆ ನಿರಂತರ 3 ದಿನಗಳ ಕಾಲ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಕೃತ್ಯ ಖಂಡನೀಯ. ಅಪರಾಧಿಗಳಿಗೆ ವಿಧಿಸುವ ಶಿಕ್ಷೆಯಿಂದ ಮುಂದೆ ಯಾರೂ ಯಾವ ಹೆಣ್ಣುಮಕ್ಕಳ ಮೇಲೂ ಅತ್ಯಾಚಾರ ಮಾಡಲು ಮುಂದಾಗಬಾರದು.

ಅಂತಹ ಶಿಕ್ಷೆ ವಿಧಿಸಬೇಕೆಂದರು. ದೇಶದಲ್ಲಿ ಮುಸ್ಲಿಂ ಹಾಗೂ ಹಿಂದೂಗಳು ಅಣ್ಣ ತಮ್ಮಂದಿರ ಹಾಗೇ ಬದುಕುತ್ತಿದ್ದೇವೆ. ಯಾವ ಮಕ್ಕಳಿಗೆ ಅನ್ಯಾಯವೆಸಗಿದರೂ ಸುಮ್ಮನೆ ಬಿಡಲ್ಲವೆಂದು ಎಚ್ಚರಿಸಿದರು. 

ಪುರಸಭೆಯ ಮಾಜಿ ಸದಸ್ಯ ಡಾ. ಬಿ.ಕೆ.ಜ್ಞಾನಪ್ರಕಾಶ್‌ ಮಾತನಾಡಿ, ಬಾಲಕಿ ಮೇಲೆ ಅತ್ಯಾಚಾರ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಅತ್ಯಾಚಾರ ಎಸಗಿದ ಯಾರೇ ಆದರೂ ಅವರಿಗೆ ಗಂಭೀರ ಶಿಕ್ಷೆ ವಿಧಿಸಬೇಕು. ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವುದು ಬೇಡ. ನರೇಂದ್ರ ಮೋದಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದರು.

ಪುರಸಭೆ ನಾಮ ನಿರ್ದೇಶಿತ ಸದಸ್ಯ ಸೈಯದ್‌ ಯಾಹಿಯಾ ಮಾತನಾಡಿ, ಹೆಣ್ಣುಮಕ್ಕಳ ಭದ್ರತೆ ವ್ಯವಸ್ಥೆ ಹೇಗೆ ಎನ್ನುವುದು ಪೋಷಕರಿಗೆ ಬಲು ದೊಡ್ಡ ಸಮಸ್ಯೆಯಾಗಿದೆ. ಇದು ಕೊನೆಯಾಗಬೇಕಾದರೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು. 

Advertisement

ಸ್ಥಳಕಾಗಮಿಸಿದ ನಾಡ ಕಚೇರಿ ಉಪ ತಹಶೀಲ್ದಾರ್‌ ರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮುನಾವರ್‌ ಪಾಷಾ, ಅಜೀಜುಲ್ಲಾ, ಸಲೀಂ, ಪುರಸಭೆ ಉಪಾಧ್ಯಕ್ಷ ರಾಮಲಿಂಗು, ಆರೀಫ್, ಡಿ. ಪದ್ಮನಾಭ್‌, ಡಾ. ಬಿ.ಕೆ.ಜ್ಞಾನಪ್ರಕಾಶ್‌, ಮಾಕನಹಳ್ಳಿ ಚೆನ್ನಮಾಯೀಗೌಡ, ಯುವ ಮುಖಂಡ ಶಿವು, ನಯಾಜ್‌ ಉಲ್ಲಾ, ಕೊಡಗಹಳ್ಳಿ ಧನಂಜಯ್‌, ಸತೀಶ್‌ ನಾಯ್ಕ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next