ಕುಣಿಗಲ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿಸಚಿವ ರಮೇಶ್ ಜಾರಕಿಹೊಳಿ ಧೋರಣೆಖಂಡಿಸಿ ತಾಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳು, ಜನಪ್ರತಿನಿಧಿಗಳು,ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿಪ್ರತಿಭಟನೆ ನಡೆಸಿದರು.
ಭಾನುವಾರ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಜಮಾವಣೆಗೊಂಡ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಅಧ್ಯಕ್ಷ ಲೋಹಿತ್, ತಾಪಂಸದಸ್ಯ ಅಲ್ಲಾಬಕ್ಷ್, ಪುರಸಭಾ ಸದಸ್ಯರಾಮಣ್ಣ, ಮಾಜಿ ಪುರಸಭಾ ಅಧ್ಯಕ್ಷ ರೆಹಮಾನ್‌ಷರೀಪ್, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆನಡೆಸಿ ರಮೇಶ್‌ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕ್ಷಮೆಯಾಚಿಸಲಿ: ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಎಫ್‌ಐಆರ್‌ದಾಖಲಾಗಿ ನಾಲ್ಕು ದಿನಕಳೆದರೂ ರಮೇಶ್‌ಜಾರಕಿಹೊಳಿ ಅವರನ್ನು ಬಂಧಿಸಿಲ್ಲ ಏಕೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.ಅಲ್ಲದೇ ಸಿಡಿ ಪ್ರಕರಣವನ್ನು ಎಸ್‌ಐಟಿಗೆ ವಹಿಸಿಪ್ರಕರಣವನ್ನು ಮುಚ್ಚು ಹಾಕುವ ಹುನ್ನಾರ ನಡೆಯುತ್ತಿದೆ ಎಂದರು.
ರಕ್ಷಣೆ ನೀಡಿ: ಯುವ ಕಾಂಗ್ರೆಸ್ ಅಧ್ಯಕ್ಷಲೋಹಿತ್ ಮಾತನಾಡಿ, ಸಂತ್ರಸ್ತ ಯುವತಿ ಹಾಗೂ ಅವರ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದೆ.ರಕ್ಷಣೆ ನೀಡುವಂತೆ ಗೃಹ ಸಚಿವರಿಗೆ ವಿಡಿಯೋಮೂಲಕ ಯುವತಿ ಮನವಿ ಮಾಡಿದ್ದಾರೆ.ಆದರೂ ಸರ್ಕಾರ ಆ ಕುಟುಂಬಗಳಿಗೆ ರಕ್ಷಣೆನೀಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ತಲೆ ತಗ್ಗಿಸುವಂತಾಗಿದೆ: ಪುರಸಭಾ ಮಾಜಿ ಅಧ್ಯಕ್ಷ ರೆಹಮಾನ್‌ಷರೀಫ್ಮಾತನಾಡಿ, ಪೆಟ್ರೋಲ್, ಡೀಸಲ್, ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಪ್ರತಿಭಟನೆನಡೆಸುವುದು ಸಾಮಾನ್ಯ. ಆದರೆ, ಬಿಜೆಪಿ ಸಚಿವರ ರಾಸಲೀಲೆ ವಿರುದ್ಧ ಕ್ರಮಕ್ಕೆ ಪ್ರತಿಭಟನೆ ನಡೆಸುವುದು ರಾಜ್ಯದ ದುರಂತವೇಸರಿ ಎಂದು ಲೇವಡಿ ಮಾಡಿದರು.
ರಮೇಶ್ ಜಾರಕಿಹೊಳಿ ಅವರ ಹೇಯ ಕೃತ್ಯದಿಂದಾಗಿನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿಗ್ರಾಪಂ ಸದಸ್ಯರಾದ ದೀಪು, ಉಮೇಶ್‌ಗೌಡ,ಮಾಜಿ ಸದಸ್ಯ ಮಾದಗೊನಹಳ್ಳಿ ಚಂದ್ರು,ಮುಖಂಡ ಮಾರುತಿ, ನರಸಿಂಹ, ದರ್ಶನ್ ಪಾಲ್ಗೊಂಡಿದ್ದರು.