Advertisement

ಕೋವಿಡ್ ಸಂಕಷ್ಟದೊಂದಿಗೆ ಕೇಂದ್ರದಿಂದ ಇಂಧನ ಕಷ್ಟ

02:47 PM Jul 08, 2020 | Suhan S |

ಮುಧೋಳ: ಕೋವಿಡ್  ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಬಡ ಜನರಿಗೆ ಕಷ್ಟ ಕೊಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಸತೀಶ ಬಂಡಿವಡ್ಡರ ಆರೋಪಿಸಿದರು.

Advertisement

ನಗರದ ರನ್ನ ವೃತ್ತದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್‌-ಡಿಸೇಲ್‌ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರು. ಕೋವಿಡ್‌-19 ಕಷ್ಟದ ಸಮಯದಲ್ಲಿ ಜನಸಾಮಾನ್ಯರ ಬಳಿ ದುಡ್ಡಿಲ್ಲ. ಯಾವ ಉದ್ಯಮಿಗಳ ಬಳಿಯೂ ದುಡ್ಡಿಲ್ಲ. ಯಾರ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲ. ಇಂತಹ ಸಮಯದಲ್ಲಿ ಜನಸಾಮಾನ್ಯರಿಗೆ ಸಹಾಯ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜವಾಬ್ದಾರಿ. ಆದರೆ, ಸರ್ಕಾರ ಬೇಕಾಬಿಟ್ಟಿಯಾಗಿ ವರ್ತಿಸುವ ಜತೆಗೆ ಬೆಲೆ ಏರಿಕೆಗೆ ಕಡಿವಾಣ ಹಾಕುತ್ತಿಲ್ಲ. ಇದರಿಂದ ಜನರು ರೊಚ್ಚಿಗೆದ್ದಿದ್ದಾರೆ ಎಂದರು.

ರಾಜ್ಯ ಸರಕಾರದಿಂದ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಪಿಪಿಇ ಕಿಟ್‌, ಸ್ಯಾನಿಟೈಸರ್‌ ಖರೀದಿಯಲ್ಲೂ ಕೋಟ್ಯಂತರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌. ಜಿ. ನಂಜಯ್ಯನಮಠ ಮಾತನಾಡಿ, ಕೇಂದ್ರ ಸರಕಾರ ಕಳೆದ 20 ದಿನಗಳಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಗಳು ತಲಾ 10 ರೂ. ವರೆಗೆ ಏರಿಕೆ  ಮಾಡಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿದೆ. ಕೋವಿಡ್‌ 19 ಸಮಯದಲ್ಲಿ ಜನರಿಗೆ ಸಹಾಯ ಮಾಡುವುದನ್ನು ಬಿಟ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ, ಜನ ಕಷ್ಟದಲ್ಲಿದ್ದಾರೆ. ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ರನ್ನ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಕಾಂಗ್ರೆಸ್‌ ಕಾರ್ಯಕರ್ತರು ಪಾದಯಾತ್ರೆ ಮೂಲಕ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲೋಕಣ್ಣ ಕೊಪ್ಪದ, ಬಾಬು ಗೋಲಶೆಟ್ಟಿ, ಕಾಶಿಮಸಾಬ ಕೆಸರಟ್ಟಿ, ದುಂಡಪ್ಪ ಲಿಂಗರಡ್ಡಿ, ಗಿರೀಶ ಲಕ್ಷಾಣಿ, ಪಾಂಡಪ್ಪ ಹೂವನ್ನವರ, ಸುಧೀರ ಅರಳಿಕಟ್ಟಿ, ಕಾಂತುಗೌಡ ಪಾಟೀಲ, ಸುಭಾಸ ಗಸ್ತಿ, ಹಣಮಂತ ಅಡವಿ, ತಿಮ್ಮಣ್ಣ ಹಲಗತ್ತಿ, ಶೋಭಾ ಜಿಗಜಿನ್ನಿ, ತಿರುಪತಿ ಬಂಡಿವಡ್ಡರ, ಶ್ರೀಕಾಂತ ಕೋಳಿ, ಕುಮಾರ ಬಂಡಿವಡ್ಡರ, ಅಶೋಕ ಬಿಲ್ಲನ್ನವರ, ಮನು ಕೆರಕಲಮಟ್ಟಿ, ಸಿದ್ದು ದೇವಗೋಳ, ಬಸವರಾಜ ಇಟ್ಟನ್ನವರ, ಜಗನ್ನಾಥ ಪವಾರ, ನವಿನ ಬದ್ರಿ, ಗುರು ಮಠದ, ವೈ.ಎಸ್‌. ಲೋಗಾಂವಿ, ಮಂಜುನಾಥ ಮಂಟೂರ, ಗೋಪಾಲ ಗುಣದಾಳ, ಮಲ್ಲು ಪೂಜಾರಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next