Advertisement

ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

05:48 AM Jul 08, 2020 | Lakshmi GovindaRaj |

ಚಾಮರಾಜನಗರ: ಅಗತ್ಯ ವಸ್ತುಗಳಾದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯೇರಿಕೆ ಖಂಡಿಸಿ ಚಾಮರಾಜನಗರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮಂಗಳವಾರ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ  ನಡೆಸಲಾಯಿತು. ನಗರದ ತಾಲೂಕು ಕಚೇರಿ ಆವರಣ  ದಲ್ಲಿ ಧರಣಿ ನಡೆಸಿದ ಪಕ್ಷದ ಪದಾಧಿ  ಕಾರಿಗಳು, ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

Advertisement

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ,  ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ಬ್ಯಾರಲ್‌ಗೆ 38 ಡಾಲರ್‌ಗಿಳಿದಿದೆ. ಆದರೂ ಕೇಂದ್ರದ ಬಿಜೆಪಿ ಸರಕಾರ ಹೆಚ್ಚು ದರ ವಿಧಿಸಿದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತದೆ. ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗುರುಸ್ವಾಮಿ, ನಗರ ಘಟಕದ ಅಧ್ಯಕ್ಷ ಮಹಮದ್‌ ಅಸರ್‌(ಮುನ್ನಾ), ಜಿಲ್ಲಾ ಉಪಾಧ್ಯಕ್ಷ ರವಿಕುಮಾರ್‌, ಜಿಪಂ ಸದಸ್ಯ ರಮೇಶ್‌,ಪ್ರಧಾನಕಾರ್ಯದರ್ಶಿಗಳಾದ ಚಿಕ್ಕಮಹದೇವು, ಮಹದೇವ, ಎಪಿಎಂಸಿ  ಅಧ್ಯಕ್ಷ ನಾಗೇಂದ್ರ, ತಾಪಂ ಸದಸ್ಯ ಮಹದೇವಶೆಟ್ಟಿ, ಚುಡಾ ಮಾಜಿಅಧ್ಯಕ್ಷ ಸುಹೇಲ್‌ ಅಲಿಖಾನ್‌, ಆಯೂಬ್‌, ನಾಗವಳ್ಳಿನಾಗಯ್ಯ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next