Advertisement

ಎನ್‌ಎಂಸಿ ಮಸೂದೆ ವಿರುದ್ಧ ಪ್ರತಿಭಟನೆ

12:46 PM Jan 03, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಸೂದೆ ವಿದ್ಯಾರ್ಥಿಗಳ ವಿರುದ್ಧವಾಗಿದ್ದು, ಖಾಸಗಿ ಮ್ಯಾನೇಜ್‌ಮೆಂಟ್‌ ಪರವಾಗಿದೆ ಎಂದು ಆರೋಪಿಸಿ ಎಐಡಿಎಸ್‌ಒ ವತಿಯಿಂದ ಮಂಗಳವಾರ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಸೂದೆಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ವೈದ್ಯಕೀಯ ಶಿಕ್ಷಣದಲ್ಲಿ ನಡೆಯುತ್ತಿರುವ ವ್ಯಾಪಾರೀಕರಣವನ್ನು ವಿಧೇಯಕವು ಕಾನೂನಾತ್ಮಕಗೊಳಿಸುತ್ತದೆ. 8.60ರಷ್ಟು ವೈದ್ಯಕೀಯ ಕಾಲೇಜು ಸೀಟನ್ನು ಕೋಟ್ಯಂತರ ರೂ.ಗೆ ಮಾರುವುದಕ್ಕೆ ಅನುಮತಿ ನೀಡುತ್ತದೆ. ಸ್ಕ್ರೀನಿಂಗ್‌ ಟೆಸ್ಟ್‌ ರದ್ದುಪಡಿಸಿ ವಿದೇಶಿ ವಿದ್ಯಾರ್ಥಿಗಳಿಗೆ ಮಣೆ ಹಾಕಲಾಗುತ್ತದೆ. ಖಾಸಗಿ ಆಡಳಿತ ಮಂಡಳಿ ಪರವಾದ ಮತ್ತು ವಿದ್ಯಾರ್ಥಿ ವಿರೋಧಿ ನಿಲುವು ಹೊಂದಿರುವ ಈ ಮಸೂದೆ ಜಾರಿ ಮಾಡಕೂಡದು ಎಂದು ಎಐಡಿಎಸ್‌ಒ ರಾಜ್ಯಉಪಾಧ್ಯಕ್ಷ ಬಿ.ಬಿ. ರವಿನಂದನ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next