ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66,ರ ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಯ ಕೂಗು ಕೇಳಿಬಂದಿದೆ.
“ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟ್ ಗಳಿದ್ದು ಎರಡೂ ಕಡೆ ಶುಲ್ಕ ಪಾವತಿಸಬೇಕೇ.?” ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಿದ ಅಕ್ರಮ ಎನ್ಐಟಿಕೆ ಸುಲಿಗೆ ಕೇಂದ್ರವನ್ನು ಸ್ಥಗಿತಗೊಳಿಸಬೇಕು, ಇಲ್ಲವೇ, ಹೆಜಮಾಡಿಯಲ್ಲಿ ಟೋಲ್ ಶುಲ್ಕ ನೀಡಿ ಬರುವ ವಾಹನಗಳಿಗೆ ಇಲ್ಲಿ ಉಚಿತ ಪ್ರವೇಶ ನೀಡಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ಎನ್ಐಟಿಕೆ ಟೋಲ್ ಕೇಂದ್ರದ ಬಳಿ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ, ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ, ಸ್ಥಳೀಯ ಸಂಘ ಸಂಸ್ಥೆಗಳು, ಟೆಂಪೋ, ಟ್ಯಾಕ್ಸಿ ಯೂನಿಯನ್ ಗಳು, ಲಾರಿ, ಟಿಪ್ಪರ್, ಬಸ್ಸು ಮಾಲಕರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ, ಸಾಮಾಜಿಕ ಕಾರ್ಯಕರ್ತರು ಜೊತೆ ನೀಡಿದ್ದಾರೆ.
ಇದನ್ನೂ ಓದಿ : ತಮ್ಮ ಮೇಲಿನ ಆರೋಪಕ್ಕೆ ನೊಂದು ಕಣ್ಣಿರಿಟ್ಟ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ