Advertisement

ಮೋದಿ ವಿರುದ್ಧ ಪಕೋಡ ಪ್ರತಿಭಟನೆ

11:19 AM Jan 31, 2018 | |

ಬೆಂಗಳೂರು: ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫ‌ಲವಾಗಿದ್ದಾರೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಆರ್‌.ಸಿ. ಕಾಲೇಜು ಎದುರು ಮಂಗಳವಾರ ಪಕೋಡ ತಯಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. 

Advertisement

ವಕೀಲರು, ವೈದ್ಯರು ಸೇರಿದಂತೆ ವಿವಿಧ ಪದವೀಧರರ ವೇಷಭೂಷಣಗಳಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು, ಫ‌ುಟ್‌ಪಾತ್‌ನಲ್ಲಿ ಪಕೋಡ ಕರಿದರು. ನಂತರ “ಪದವೀಧರರು ಉದ್ಯೋಗಕ್ಕಾಗಿ ಸಂಪರ್ಕಿಸಿ ನರೇಂದ್ರ ಮೊದಿ ಪಕೋಡ ವ್ಯಾಪಾರ’ ಎಂದು ಫ‌ಲಕ ಹಿಡಿದು ಅಣಕು ಪ್ರದರ್ಶನ ಮಾಡಿದರು. 

ಮೋದಿ ಪಕೋಡ 20 ರೂ., ಅಮಿತ್‌ ಶಾ ಪಕೋಡ 20 ರೂ., ಯೋಗಿ ಆದಿತ್ಯನಾಥ ಪಕೋಡ 20 ರೂ., ಯಡಿಯೂರಪ್ಪ ಪಕೋಡ 20 ರೂ. ಎಂದು ತಿಂಡಿಗಳ ಫ‌ಲಕ ಪ್ರದರ್ಶಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಧಿಕ್ಕಾರ ಕೂಗಿದರು. ಸ್ನಾತಕೋತ್ತರ ಪೂರೈಸಿರುವ ಶ್ರೀಧರ್‌, ಬುಡಬುಡಿಕೆ ವೇಶದಲ್ಲಿ ಭಾಗವಹಿಸಿ, ಪಕೋಡ ತಯಾರಿಸಿ ಹಂಚಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಜಯೇಂದರ್‌, ಉದ್ಯೋಗಾವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದ  ಪ್ರಧಾನಿ ಮೋದಿಯವರು ತಮ್ಮ ಮಾತು ಉಳಿಸಿಕೊಂಡಿಲ್ಲ ಎಂದು ದೂರಿದರು. ಏಕಕಾಲದಲ್ಲಿ ಆರ್‌ಸಿ ಕಾಲೇಜು, ಎಸ್‌ಜೆಪಿ ಕಾಲೇಜು, ಮೌಂಟ್‌ ಕಾರ್ಮೆಲ… ಕಾಲೇಜು ಮತ್ತು ಶೇಶಾದ್ರಿಪುರ ಕಾಲೇಜುಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next