Advertisement

ಹಿಂದೂ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ

06:40 PM Jul 28, 2022 | Team Udayavani |

ಕೊಪ್ಪಳ: ಮಂಗಳೂರು ಜಿಲ್ಲೆಯಲ್ಲಿ ಹಿಂದೂ ಯುವಕ ಪ್ರವೀನ್‌ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ನಗರದ ಅಶೋಕ ವೃತ್ತದಲ್ಲಿ ಹಿಂದೂಪರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯಲ್ಲಿ ಮುಖಂಡ ಗವಿಸಿದ್ದಪ್ಪ ಜಂತಕಲ್‌ ಮಾತನಾಡಿ, ಪ್ರವೀಣ ಹಂತಕರನ್ನು ರಾಜ್ಯ ಸರ್ಕಾರ ಎನ್‌ಕೌಂಟರ್‌ ಮಾಡಬೇಕು. ಪ್ರವೀಣ ಭಾರತಾಂಬೆಯ ಹೆಮ್ಮೆಯ ಪುತ್ರ, ಹಿಂದುತ್ವವಾದಿ ಹಾಗೂ ಜಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯನಾಗಿದ್ದ. ಅವರ ಮೇಲಿನ ದಾಳಿ ಮತ್ತು ಹತ್ಯೆ ನಿಜಕ್ಕೂ ಖೇದಕರ. ಹಿಂದೂತ್ವದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಹಾಗೂ ಹಿಂದೂತ್ವದ ಹೆಸರಿನ ಮೇಲೆ ಅಧಿಕಾರ ಅನುಭವಿಸುತ್ತಿರುವ ಸಿಎಂ ಹಾಗೂ ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ರಕ್ಷಣೆ ನೀಡಲು ವಿಫಲರಾಗಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಹಂತಕರನ್ನು ಬಂಧಿಸಿ ಉತ್ತರ ಪ್ರದೇಶದ ಸರ್ಕಾರದ ಆದೇಶವನ್ನು ರಾಜ್ಯದಲ್ಲಿ ಪಾಲಿಸಬೇಕು. ಹತ್ಯೆ ಮಾಡಿದವರನ್ನು ಎನ್‌ಕೌಂಟರ್‌ ಮಾಡಬೇಕು. ಇಲ್ಲವೇ ಹಂತಕರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಿದಾ ಮಾತ್ರ ಪ್ರವೀಣ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ. ರಾಜ್ಯದಲ್ಲಿ ಈ ರೀತಿಯ ಹತ್ಯೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಎಸ್‌ಡಿಪಿಐ, ಪಿಎಫ್‌ಐ ಹಾಗೂ ಇನ್ನಿತರ ಹಿಂದೂ ವಿರೋಧಿ ಸಂಘಟನೆಗಳನ್ನು ಸರ್ಕಾರ ನಿಷೇಧಿಸಬೇಕು. ಇಲ್ಲವಾದರೆ ಹಿಂದೂ ಕಾರ್ಯಕರ್ತರು ರಾಜ್ಯಾದ್ಯಂತ ಬೀದಿಗಳಿದು ಪ್ರತಿಭಟನೆ ಮಾಡಲಿದ್ದಾರೆ. ಕೂಡಲೇ ಹಂತಕರನ್ನು ಬಂಧಿಸಿ ಎನ್‌ಕೌಂಟರ್‌ ಮಾಡಬೇಕೆಂದು ಒತ್ತಾಯಿಸಲಾಯಿತು.

ಪ್ರತಿಭಟಣೆಯಲ್ಲಿ ಹಿಂದೂಪರ ಮುಖಂಡರಾದ ಉಮೇಶ ಕೊಡ್ಲೆಕರ್‌, ರವಿಚಂದ್ರ ಮಾಲಿಪಾಟೀಲ್‌, ರಾಕೇಶ ಪಾನಗಂಟಿ, ಆನಂದ ಆರ್ಶಿತ್‌, ಗವಿ ಗೋರವರ್‌, ದೀಪಕ ಹಿರೇಮಠ, ಅಕ್ಷಯ ಜ್ಞಾನಮೋಠೆ, ಕಿರಣ ಹೂಗಾರ, ಶರಣು ಸಚಿನ್‌, ರಾಘು, ಮಲ್ಲಿಕಾರ್ಜುನ ಸಜ್ಜನ, ವಿಶ್ವನಾಥ ವರುಣ ನೀಲಕಂಠ, ಮಂಜುನಾಥ ಹಡಪದ, ನಾಗರಾಜ ಓಜನಹಳ್ಳಿ, ಹನುಮಂತ ಓಜನಹಳ್ಳಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next