ಅರಕಲಗೂಡು: ಪಪಂ ಅಧಿಕಾರಿ, ಸಿಬ್ಬಂದಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕೈಗೊಳ್ಳುವ ವಿವಿಧ ಯೋಜನೆ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸದಸ್ಯರ ಗಮನಕ್ಕೆ ತರದೆ ಸಭೆಗೆ ಮಂಡಿಸುತಿದ್ದು, ಇದಕ್ಕೆ ಸಭೆ ಅನುಮೋದನೆ ನೀಡಬಾರದು ಎಂದು ಮಾಜಿ ಉಪಾಧ್ಯಕ್ಷ ನಿಖಿಲ್ ಕುಮಾರ್ ಸಭೆಯಲ್ಲಿ ಆಗ್ರಹಿಸಿದರು.
ಸೋಮವಾರ ಪಪಂ ಸಭಾಂಗಣದಲ್ಲಿ ಅಧ್ಯಕ್ಷೆ ಶಾರದ ಪೃಥ್ವಿರಾಜ್ ಅಧ್ಯಕ್ಷತೆಯಲ್ಲಿ ನಡೆ ದ ವಿಶೇಷ ಸಭೆಯಲ್ಲಿ 2022-23ನೇ ಸಾಲಿನ ಎಸ್‌ಎಫ್‌ಸಿ ಮತ್ತು ಪಪಂ ನಿಧಿ ಶೇ.24.10 ಮ ತ್ತು ಶೇ.7.25ರ ಯೋಜನೆಯಡಿ 4. 82 ಲಕ್ಷ ಹಾಗೂ ಪಪಂ ನಿಧಿ ಯಡಿ ಅಂಗನವಾಡಿಗಳಿಗೆ ಅವಶ್ಯಕ ಸಾಮಗ್ರಿಗಳನ್ನ ಸರಬರಾಜು ಮಾಡಲು 5.88ಲಕ್ಷ ವೆಚ್ಚದ ಕ್ರಿಯಾ ಯೋಜನೆಯನ್ನ ತಯಾರಿಸಿ ಸಭೆ ಅನುಮೋದನೆಗೆ ಮಂಡಿಸಲಾಗಿದೆ. ಆದರೆ, ಈ ವಿಷಯದ ಬಗ್ಗೆ ಹಿಂದಿನ ಯಾವುದೇ ಸಭೆಗಳಲ್ಲಿ ವಿಷಯ ಪ್ರಸ್ತಾಪವಾಗಿಲ್ಲ. ಏಕಾಏಕಿ ಇಂದಿನ ಸಭೆಯಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದು ಕೊಂಡು, ನ್ಯಾಯಾ ಸಿಗುವ ತನಕ ಸಭೆ ನಡೆಯಲು ಬಿಡುವುದಿಲ್ಲ ಎಂದು ಏಕಾಂಗಿ ಪ್ರತಿಭಟನೆ ನಡೆಸಿದರು.
ಗುತ್ತಿಗೆದಾರರು ಪರವಾನಗಿ ಹೊಂದಿಲ್ಲ: ಪೌರಕಾರ್ಮಿಕರಿಗೆ ನೀಡುವ ಬೆಳಗ್ಗಿನ ಉಪಾಹಾರ ಸರಬ ರಾಜು ಕುರಿತು ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಟೆಂಡರ್ ಸಲ್ಲಿಸಿದ್ದಾರೆ. ಇವರು ಅಧಿಕೃತ ಪರವಾನಗಿ ಹೊಂದಿಲ್ಲ. ಹೀಗಿದ್ದರೂ ಕೂಡ ಇವರ ಕೊಟೇಷನ್‌ನ ಅಂಗೀಕರಿಸಿ ಟೆಂಡರ್ ಅಂತಿಮಗೊಳಿಸಲು ಸಭೆ ಗಮನಕ್ಕೆ ತರಲಾಗಿದೆ. ಅಲ್ಲದೆ ಅಂಗನವಾಡಿ ಗಳಿಗೆ ಅಗತ್ಯ ವಸ್ತುಗಳು ಪೂರೈಕೆ ಸರಬರಾಜು ಕುರಿತು ಸ್ಥಳೀಯ ಪ್ಲೇವುಡ್, ಗ್ಲಾಸ್ ಅಂಗಡಿಯವರು ಕೊಟೇಷನ್ ಸಲ್ಲಿಸಿದ್ದಾರೆ.
ಟೆಂಡರ್ ಮರು ಕರೆಯಲಾಗುವುದು: ಇಲ್ಲಿಂದ ಅಂಗನವಾಡಿಗಳಿಗೆ ಅಗತ್ಯ ವಸ್ತುಗಳ ಸರಬರಾಜು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೇ, ಈ ಬಗ್ಗೆ ಅನಧಿ ಕೃತ ಏಜೆನ್ಸಿಗಳಿಗೆ ನೋಟಿಸ್ ನೀಡಬೇಕೆಂದು ಒತ್ತಾಯಿಸಿದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಈ ವಿಷಯಗಳ ಟೆಂಡರ್‌ಗಳನ್ನು ಮರು ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ತೆರಿಗೆ ಹಣ ಲೂಟಿ: ಪಪಂ ಅಧಿಕಾರಿಗಳು ಕಾಮಗಾರಿಗಳ ಹೆಸರಿನಲ್ಲಿ ಅವೈಜ್ಞಾನಿಕ ಹಾಗೂ ಅನಾವಶ್ಯಕವಾಗಿ ಕ್ರಿಯಾ ಯೋಜನೆಯನ್ನ ತಯಾರಿಸಿ ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ಉದ್ದೇಶವನ್ನ ಹೊಂದುವ ಮೂಲಕ ಜನರ ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ ಎಂದು ಸದಸ್ಯೆ ಲಕ್ಷ್ಮೀ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಶೇ.7.25 ರ ಯೋಜನೆಯಡಿ ಅಂಗನ ವಾಡಿಗಳಿಗೆ ಅವ ಶ್ಯಕತೆ ಇರುವ ಸಾಮಗ್ರಿ ಸರಬರಾಜು ಮಾಡಲು 5.88 ಲಕ್ಷ ವೆಚ್ಚವನ್ನ ಕಾಯ್ದಿರಿಸಲಾಗಿದೆ. ವಾರ್ಡಿನ ಸದಸ್ಯರ ಗಮನಕ್ಕೆ ತರದೆ ಅಂಗನವಾಡಿಗಳ ಹೆಸರಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಟೆಂಡರ್ ಅನುಮೋದನೆಗೆ ತಂದಿರುವುದು ಎಷ್ಟರ ಮಟ್ಟಿಗೆ ಸರಿ? ಅಂಗನವಾಡಿಗಳಿಗೆ ಬೇಕಾಗಿರುವ ಅವಶ್ಯಕ ವಸ್ತುಗಳನ್ನ ನೀಡುವಂತೆ ಕ್ರಮಕೈಗೊಳ್ಳಿ. ಬೀದಿ ದೀಪಗಳ ನಿರ್ವಹಣೆ ಸರಿ ಇಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರಶ್ಮಿ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಉಪಸ್ಥಿತರಿದ್ದರು.