Advertisement

ಅಂಬೇಡ್ಕರ್‌ಗೆ ಅವಮಾನ ಖಂಡಿಸಿ ಪ್ರತಿಭಟನೆ

06:08 PM Feb 12, 2021 | Nagendra Trasi |

ಮುದ್ದೇಬಿಹಾಳ: ಇಂಡಿ ತಾಲೂಕು ಮಾರ್ಸನಳ್ಳಿಯಲ್ಲಿ ಡಾ|ಅಂಬೇಡ್ಕರ್‌ ನಾಮಫಲಕಕ್ಕೆ ಅವಮಾನ ಘಟನೆ ಖಂಡಿಸಿ ಇಲ್ಲಿನ ದಲಿತಪರ, ಪ್ರಗತಿಪರ ಸಂಘಟನೆಗಳ ನೂರಾರು ಸದಸ್ಯರು ಪಟ್ಟಣದಲ್ಲಿ ಹಲಗೆ ಮೆರವಣಿಗೆ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯದ ಗೃಹ ಸಚಿವ ಎಸ್‌.ಆರ್‌.ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಇದಕ್ಕೂ ಮುನ್ನ ಪಟ್ಟಣದ ಡಾ|ಅಂಬೇಡ್ಕರ್‌ ವೃತ್ತದಲ್ಲಿರುವ ಡಾ|ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರ್ಯಾಲಿಗೆ ಚಾಲನೆ ನೀಡಲಾಯಿತು. ನಂತರ ಸಂಗೊಳ್ಳಿ ರಾಯಣ್ಣ, ಬಸವೇಶ್ವರ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ಆಗಮಿಸಿತು.

ಮಾರ್ಗ ಮಧ್ಯೆ ಬಸವೇಶ್ವರ ವೃತ್ತದಲ್ಲಿ ಹಾಗೂ ಮಿನಿ ವಿಧಾನಸೌಧ ಎದುರು ಪ್ರತಿಭಟನಾನಿರತರನ್ನುದ್ದೇಶಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ. ಮುದೂರ, ಬಹುಜನ ಸಮಾಜ ಪಕ್ಷದ ಜಿಲ್ಲಾ ಉಸ್ತುವಾರಿ ವಕೀಲ ಕೆ.ಬಿ.ದೊಡಮನಿ, ಜಿಲ್ಲಾ ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಪುತ್ರ ಅಜಮನಿ, ಜಿಲ್ಲಾ ಸಂಚಾಲಕರಾದ ಚನ್ನಪ್ಪ ವಿಜಯಕರ್‌, ಹರೀಶ ನಾಟೀಕಾರ, ದಲಿತ ಸಂಘಟನೆಗಳ ಮುಖಂಡರಾದ ಬಸವರಾಜ ಪೂಜಾರಿ, ದೇವರಾಜ ಹಂಗರಗಿ ಮತ್ತಿತರರು ಮಾತನಾಡಿದರು.

ಈ ವೇಳೆ ಗ್ರೇಡ್‌-2 ತಹಶೀಲ್ದಾರ್‌ ಡಿ.ಜಿ.ಕಳ್ಳಿಮನಿ ಅವರ ಮೂಲಕ ಗೃಹಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ದೇಶದ ಮಹಾನ್‌ ನಾಯಕ ಡಾ|ಅಂಬೇಡ್ಕರ್‌ ಅವರನ್ನು ಅವಮಾನಿಸಿದ್ದು ಖಂಡನೀಯ. ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಕೊಂಡು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಪೊಲೀಸ್‌ ಇಲಾಖೆ ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಮೀನಮೇಷ ಎಣಿಸದೆ ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಬೇಕು. ಇದರಲ್ಲಿ ವಿಫಲವಾದರೆ ಅಥವಾ ವಿಳಂಬ ಮಾಡಿದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ವಿವಿಧ ಸಂಘಟನೆಗಳ ಪ್ರಮುಖರಾದ ಭಗವಂತ ಕಬಾಡೆ, ಅಶೋಕ ಇರಕಲ್‌, ಸಂಗಮೇಶ ನಾಲತವಾಡ, ಬಾಲಚಂದ್ರ ಹುಲ್ಲೂರ, ತಿಪ್ಪಣ್ಣ ಗೋನಾಳ, ಪ್ರಕಾಶ ಚಲವಾದಿ, ಸಂತೋಷ ಅಜಮನಿ, ಮಲ್ಲು ತಳವಾರ, ಕರ್ನಾಟಕ ಮಾದಿಗರ ಸಂಘದ ತಾಲೂಕು ಅಧ್ಯಕ್ಷ ಶೇಖರ ಮಾದರ, ಹಣಮಂತ ಗುಂಡಕರ್ಜಗಿ, ಪರಸಪ್ಪ ಮಾದರ, ಮಹಾಂತೇಶ ಬಾಗಲಕೋಟ, ರಾಜು ಚಲವಾದಿ, ತನ್ವೀರ ಮಕಾನದಾರ, ಖಯ್ಯೂಮ್‌ ಚೌಧರಿ, ರಾವುತಪ್ಪ ಮಾದರ, ಹಣಮಂತ ಚಿರ್ಚನಕಲ್‌, ಮಂಜುನಾಥ ಮಾದರ, ಯಲ್ಲಪ್ಪ ಚಲವಾದಿ, ಜೆ.ಬಿ.ಚಲವಾದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next