Advertisement

ಜನರ ನೆಮ್ಮದಿ ಕೆಡಿಸಿದ ಅಸಹಿಷ್ಣುತೆ: ಹಸೀನಾ

09:49 AM Apr 26, 2018 | |

ಮಹಾನಗರ: ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿ ಜಿಲ್ಲಾ ಮಾನವ ಹಕ್ಕುಗಳ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

Advertisement

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಹಸೀನಾ ಇಸ್ಮಾಯಿಲ್‌ ಮಾತನಾಡಿ, ದೇಶದಲ್ಲಿ ವ್ಯಾಪಕವಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಕೇಂದ್ರ ಸರಕಾರ ಮೌನದಲ್ಲಿದೆ. ದೇಶದಲ್ಲಿ ಅಸಹಿಷ್ಣುತೆ ಜನರ ನೆಮ್ಮದಿಯನ್ನು ಕೆಡಿಸಿದೆ ಎಂದರು. ಸಾಮಾಜಿಕ ಕಾರ್ಯಕರ್ತೆ ಶ್ರೀಲತಾ ಸಾಲ್ಯಾನ್‌ ಮಾತನಾಡಿದರು.

ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಅನ್ವರ್‌ ಉಳ್ಳಾಲ್‌, ಮುಫೀದಾ, ನಜೀರ್‌ ಬಾರ್ಲಿ, ಸೈಫ್‌ ಸುಲ್ತಾನ್‌, ಜುಲ್ಫಿಕರ್‌ ಖಾಸಿಮ್‌, ರಝಿಯಾ ಇಬ್ರಾಹಿಂ, ರೆಹನಾಜ್‌ ತಲಪಾಡಿ, ಅಬ್ದುಲ್‌ ರೆಹಮಾನ್‌, ಸತ್ತಾರ್‌, ಆರಿಫ್‌ ಕುದ್ರೋಳಿ, ಮಹಮದ್‌ ಮೆಹ್ರಾಜ್‌, ಮಹಮದ್‌ ಶಬೀರ್‌ ಸಹಿತ ಇನ್ನಿತರ ಸದಸ್ಯರಿದ್ದರು. ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವವರ ವಿರುದ್ಧ ಕಠಿನ ಕ್ರಮ ಜರಗಿಸಬೇಕೆಂದು ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಠಿನ ಶಿಕ್ಷೆಗೆ ಗುರಿಪಡಿಸಿ
ಅತ್ಯಾಚಾರ ಸಹಿತ ಮಹಿಳ ದೌರ್ಜನ್ಯವೆಸಗುವವರನ್ನು ಕಠಿನ ಶಿಕ್ಷೆಗೆ ಗುರಿಪಡಿಸಿದರೆ ಈ ಪ್ರಕರಣಗಳು ಮರುಕಳಿಸದಂತೆ ತಡೆಯಬಹುದು. ಇಂದು ಹೆಣ್ಣು ಮಗಳು ಮನೆ ಬಿಟ್ಟು ಹೋದರೆ ಮರಳಿ ಬರುವವರೆಗೆ ಹೆತ್ತವರು ಆತಂಕದಲ್ಲಿರುವಂತಿದೆ . ಅತ್ಯಾಚಾರವೆಸಗುವ ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ದೇಶದಲ್ಲಿ ಮಹಿಳಾ ಹಕ್ಕು ಪಾಲನೆಯಾಗುತ್ತಿಲ್ಲ.
ಶ್ರೀಲತಾ ಸಾಲ್ಯಾನ್‌, ಸಾಮಾಜಿಕ ಕಾರ್ಯಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next