Advertisement
ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಿಂಜಾವೇ ಮುಖಂಡ ಸತ್ಯಜಿತ್ ಸುರತ್ಕಲ್ ಮುಂದಾಳತ್ವದಲ್ಲಿ ಶಾಂತಿಯುತವಾಗಿ ಶವಯಾತ್ರೆ ನಡೆಯುತ್ತಿತ್ತು. ಇದು ವೀಡಿಯೋದಲ್ಲಿ ಕೂಡ ದಾಖಲಾಗಿದೆ. ಆದರೆ ಗಲಭೆಯ ನೆಲೆಯಲ್ಲಿ ಅವರ ಮೇಲೆಯೇ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 307 ಸೆಕ್ಷನ್‌ನಡಿ ಕೇಸು ದಾಖಲಿಸಲಾಗಿದ್ದು, ರಾತೋ ರಾತ್ರಿ ಮನೆಗೆ ನುಗ್ಗಿ ಸತ್ಯಜಿತ್ ಅವರ ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿರುವುದು ಖಂಡನೀಯ ಎಂದರು.
Related Articles
ಸವಿತಾ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ರವಿವಾರ ರಾತ್ರಿ 2.40ರ ವೇಳೆಗೆ ಸುಮಾರು 50 ಮಂದಿ ಪೊಲೀಸರು ನಮ್ಮ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಮಾತ್ರ ಇದ್ದರೂಏಕಾಏಕಿ ನುಗ್ಗಿ ಮನೆಯನ್ನು ಜಾಲಾಡಿದ್ದಾರೆ. ಓರ್ವ ಮಹಿಳಾ ಪೊಲೀಸ್‌ಕೂಡ ಈ ಸಂದರ್ಭ ಜತೆಯಲ್ಲಿರಲಿಲ್ಲ. ನನ್ನ ಗಂಡ ಸತ್ಯಜಿತ್ ಸುರತ್ಕಲ್‌ಮನೆಯಲ್ಲಿ ಇಲ್ಲವೆಂದರೂ ಕೇಳದೆ ಮನೆಯ ಇಂಚಿಂಚನ್ನೂ ಜಾಲಾಡಿದ್ದಾರೆ. ಕೇವಲ ಮಹಿಳೆಯರೇ ಇರುವ ಮನೆಗೆ 50 ಮಂದಿ ಪೊಲೀಸರು ದಾಳಿ ನಡೆಸುವುದು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಶೋಭೆ ತರುವಂಥದ್ದಲ್ಲ. ಈ ಕುರಿತು ಸುರತ್ಕಲ್ ಠಾಣೆಗೆ ದೂರು ನೀಡಲಾಗುವುದು ಎಂದರು.
Advertisement