Advertisement

ಡಿ.ಕೆ. ಶಿವಕುಮಾರ್‌ ಒಡೆತನದ ಹಿಲ್‌ವಿಲ್‌ ಶಾಲೆ ವಿರುದ್ಧ ಪ್ರತಿಭಟನೆ

11:51 AM May 10, 2017 | Team Udayavani |

ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಕುಟುಂಬದವರ ಒಡೆ ತದ, ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್‌ ಹಿಲ್‌ವೀವ್‌ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಮಕ್ಕಳ ಪ್ರವೇಶ ನಿರಾಕರಿ­ಸಿದೆ ಎಂದು ಆರೋಪಿಸಿ ಪೋЭ‌ಕರು ಚಾಮರಾಜಪೇಟೆಯ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಶಾಲೆಯಲ್ಲಿ ಆರ್‌ಟಿಇ ಅಡಿ ಲಭ್ಯ­ವಿದ್ದ ಸೀಟಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿಯಂತೆ ಅರ್ಜಿ ಸಲ್ಲಿಸಿ, ಆನ್‌ಲೈನ್‌ ಸೀಟು ಹಂಚಿಕೆ ಪ್ರಕ್ರಿಯೆ ಮೂಲಕವೇ ಸೀಟು ಪಡೆದ ಮಕ್ಕಳಿಗೆ ಪ್ರವೇಶ ನಿರಾಕರಿಸುವ ಮೂಲಕ ಶಾಲಾಡಳಿತ ಮಂಡಳಿ ಸರ್ಕಾರದ ಆದೇಶ ಉಲ್ಲಂ ಸಿದೆ ಎಂದು ಪೋಷಕರು ಆರೋಪಿಸಿದರು.

ಶಿಕ್ಷಣ ಇಲಾಖೆಯ ನಿಯಮದಂತೆ ಆರ್‌ಟಿಇ ಸೀಟು ಹಂಚಿಕೆಯಾದ ಮಕ್ಕಳ ಪ್ರವೇಶಕ್ಕೆ ಮೇ 10 ಕೊನೆ ದಿನವಾದ್ದು, ಶಾಲಾಡಳಿತ ಮಂಡಳಿ ಯವರು ಮಂಗಳವಾರ ಸೀಟು ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಸಚಿವ ಡಿ.ಕೆ.ಶಿವಕುಮಾರ್‌, ಅಧಿಕಾರಿಗಳು ಹಾಗೂ ಶಾಲಾಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಈ ಸಂಬಂಧ ಸ್ಪಷ್ಟೀಕರಣ ನೀಡಿದ ಸಚಿವ ಡಿ.ಕೆ.ಶಿವಕುಮಾರ್‌, ಕಾನೂನು ರೀತಿಯಲ್ಲೇ ನಡೆದುಕೊಳ್ಳುತ್ತಿದ್ದೇವೆ. ಮೊದಲ ಹಂತದಲ್ಲಿ ಹಂಚಿಕೆಯಾಗಿರುವ ಸೀಟುಗಳಿಗೆ ಪ್ರವೇಶ ನೀಡಿದ್ದೇವೆ. ಪ್ರತಿಭಟನೆ ನಡೆಸುತ್ತಿರುವ ಪೋಷಕರು ಎರಡು ಹಂತ­ದಲ್ಲಿ ಸೀಟು ಕೇಳುತ್ತಿ¨ªಾರೆ. ಹಾಗೆ ನೋಡಿದರೆ ಆರ್‌ಟಿಇ ಮಕ್ಕಳ ಪೋಷಕರ ಆದಾಯ ಪರಿಶೀಲಿಸುವ ಅಗತ್ಯ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next