Advertisement
ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಚಾಲಕ ರಾಜ್‌ಮೋಹನ್ ರಾವ್ ಮಾತನಾಡಿ, ಹೆದ್ದಾರಿ ನಿರ್ಮಿಸಿದ ಬಳಿಕ ನಿರ್ವಹಣೆ ಪ್ರಮುಖವಾಗಿದ್ದು, ಸಾವುನೋವುಗಳಾಗದಂತೆ ನೋಡಬೇಕಾಗುತ್ತದೆ. ಆದರೆ ಇಲ್ಲಿ ನಿರ್ವಹಣೆಯಿಲ್ಲದ ಕಳಪೆ ಹೆದ್ದಾರಿಗೆ ಟೋಲ್ ಸಂಗ್ರಹಿಸಲಾಗುತ್ತಿರುವುದು ಇದು ಖಂಡನೀಯ. ದುರಸ್ತಿ ಮಾಡುವವರೆಗೆ ಹೆದ್ದಾರಿ ಇಲಾಖೆಯ ಕಚೇರಿ ಮುಂಭಾಗವೂ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು.
ಪುಷ್ಪರಾಜ್ ಶೆಟ್ಟಿ ಮಾತನಾಡಿ, ಇರ್ಕಾನ್ ಸಂಸ್ಥೆಯ ಮೂಲಕ ಹೆದ್ದಾರಿ ಇಲಾಖೆ ನಿರ್ಮಿಸಿರುವ ಈ ರಸ್ತೆ ಅತ್ಯಂತ ಕಳೆಪೆಯಾಗಿದ್ದು,ಉಡುಪಿ ಕಡೆ ನವಯುಗ್ ಮಾಡಿರುವ ಕಾಮಗಾರಿಯೂ ಹೆಚ್ಚಿನ ಗುಣಮಟ್ಟ ಹೊಂದಿಲ್ಲ. ಈ ಮಾರ್ಗವಾಗಿ ಮುಖ್ಯಮಂತ್ರಿ, ಸಂಸದರು ಹೋಗುತ್ತಿದ್ದರೂ ಮೌನ ವಹಿಸಿದ್ದಾರೆ. ಇನ್ನು ಮುಂದೆ ಯಾವುದೇ ಅಪಘಾತವಾದರೂ ಹೆದ್ದಾರಿ ಇಲಾಖೆ ಮೇಲೆ ಕ್ರಿಮಿನಲ್ ದೂರು ದಾಖಲಿಸುವ ಮೂಲಕ ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಣ್ಣ ಕೈಗಾರಿಕ ಕೇಂದ್ರದ ಗೌರವ್ ಹೆಗ್ಡೆ ಮಾತನಾಡಿ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರಸ್ತೆಯ ನಿರ್ವಹಣೆಗೆ ಹಣವಿಲ್ಲ ಎಂದು ಅಧಿಕಾರಿಗಳು ಸಬೂಬು ನೀಡುತ್ತಿರುವುದು ನಾಚಿಕೆಗೇಡಿನ ವಿಷಯ. ಪ್ರತಿ ವರ್ಷ ಬೈಕಂಪಾಡಿ, ಪಣಂಬೂರು, ಹೊನ್ನಕಟ್ಟೆ ಪ್ರದೇಶದಲ್ಲಿ ರಸ್ತೆ ಕೆಟ್ಟು ಹೋಗುತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಹೆದ್ದಾರಿ ಇಲಾಖೆ, ಪ್ರಾಧಿಕಾರಗಳು ವಿಫಲವಾಗಿವೆ ಎಂದರು. ಸಮಿತಿ ಕಾರ್ಯದರ್ಶಿ ಗಂಗಾಧರ ಬಂಜನ್ , ಅಧ್ಯಕ್ಷ ಭರತ್ ಶೆಟ್ಟಿ, ಗಂಗಾಧರ ಬಂಜನ್, ಜಯರಾಮ್ ಆಚಾರ್ಯ, ನಾಗೇಶ್ ಕುಲಾಲ್, ಶ್ರೀನಾಥ್ ವಂಶಿ, ಯೋಗೀಶ್ ಸನಿಲ್, ಸತೀಶ್, ಗಣೇಶ್ ಎನ್‌ಎಂಪಿಟಿ, ಹಿರಿಣಿ, ಬೇಬಿ ಟೀಚರ್, ಗಣೇಶ್ ಕುಲಾಲ್, ರಫೀಕ್ ಕುಳಾಯಿ, ಆಲ್ವಿನ್, ಗಿಲ್ಬರ್ಟ್ ಪಿಂಟೊ, ಜನಾರ್ದನ್ ಸಾಲ್ಯಾನ್, ಯಜ್ನೀಶ್ ಕುಳಾಯಿ, ದೀಪಕ್ ಕುಳಾಯಿ, ಪುಷ್ಪರಾಜ್, ಉಸ್ಮಾನ್ ಕುಕ್ಕಾಡಿ, ಕಿರಣ್ ಪ್ರಸಾದ್ ರೈ ಮತ್ತಿತರರಿದ್ದರು. ಕುಲಾಲ ಸಂಘ, ರೋಟರಿ ಕ್ಲಬ್, ಅಜಯ್ ಸ್ಪೋರ್ಟ್ಸ್ ಕ್ಲಬ್, ಬಿಲ್ಲವ ಸಮಾಜ ಸೇವಾ ಸಂಘ, ವಿಶ್ವಕರ್ಮ ಯುವ ಸೇವಾದಳ, ವಿದ್ಯಾಸಾಗರ ಕ್ಲಬ್,ಜುಮ್ಮಾ ಮಸೀದ್ ಕುಳಾಯಿ, ಕಲಾಕುಂಭ ವೇದಿಕೆ, ಗ್ರಾಮ ಸಂಘ, ಹೊನ್ನಕಟ್ಟೆ ಫ್ರೆಂಡ್ಸ್, ನಾಗರಿಕ ಸಮಿತಿ ಮುಂತಾದವು ಪಾಲ್ಗೊಂಡವು.